ಮಂಗಳವಾರ, ಅಕ್ಟೋಬರ್ 22, 2019
25 °C
ಅರ್ಹ ಪರವಾನಗಿದಾರರನ್ನು ಗುರುತಿಸಿದ 7 ಸದಸ್ಯರ ಸಮಿತಿ ಒಪ್ಪಿಗೆ

10 ದಿನಗಳೊಳಗೆ ಮರಳುಗಾರಿಕೆ ಆರಂಭ ಸಾಧ್ಯತೆ

Published:
Updated:

ಉಡುಪಿ: ಜಿಲ್ಲಾಧಿಕಾರಿ ಜಗದೀಶ್ ಅವರ ನೇತೃತ್ವದಲ್ಲಿ ಮಂಗಳವಾರ 7 ಸದಸ್ಯರ ಸಮಿತಿ ಸಭೆ ನಡೆದಿದ್ದು, ಜಿಲ್ಲೆಯಲ್ಲಿ ಶೀಘ್ರ ಮರಳುಗಾರಿಕೆ ಆರಂಭವಾಗುವ ಸೂಚನೆ ಸಿಕ್ಕಿದೆ. ಮರಳು ಗುತ್ತಿಗೆ ಪರವಾನಗಿದಾರರನ್ನು ಗುರುತಿಸಲಾಗಿದ್ದು, ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ 10 ದಿನಗಳೊಳಗೆ ಮರಳು ದಿಬ್ಬಗಳ ತೆರವು ಆರಂಭವಾಗಲಿದೆ.

ಈಗಾಗಲೇ ಸಾಂಪ್ರದಾಯಿಕ ಮರಳು ಪರವಾನಗಿದಾರರಿಂದ ಮರಳು ದಿಬ್ಬಗಳ ತೆರವಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, 170 ಪರವಾನಗಿದಾರ ಪೈಕಿ ಕ್ರಿಮಿನಲ್‌ ಮೊಕದ್ದಮೆ ಇರುವ ಪರವಾನಗಿದಾರರನ್ನು ಹೊರತುಪಡಿಸಿ ಉಳಿದವರನ್ನು ಅರ್ಹರು ಎಂದು ಗುರುತಿಸಲಾಗಿದೆ. ಅರ್ಹರಿಗೆ ಅನುಮತಿ ನೀಡಲು ಸಮಿತಿ ಒಪ್ಪಿಗೆಯನ್ನೂ ಸೂಚಿಸಿದೆ ಎನ್ನಲಾಗಿದೆ.

ಸಾಂಪ್ರದಾಯಿಕ ಮರಳು ಪರವಾನಿಗೆದಾರರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದ್ದು, ಅರ್ಜಿಗಳನ್ನು ಪರಿಶೀಲಿಸಿ, ಮರಳು ದಿಬ್ಬಗಳನ್ನು ವೀಕ್ಷಿಸಿ ಜಿಲ್ಲಾಡಲಿತ ಅನುಮತಿ ನೀಡಲಿದೆ. ಬಳಿಕ ಮರಳು ದಿಬ್ಬ ತೆರವು ಆರಂಭವಾಗಲಿದೆ.

8 ಮರಳು ದಿಬ್ಬಗಳ ತೆರವಿಗೆ 2019ರ ಜನವರಿ 17ರಂದು ನಿರಾಕ್ಷೇಪಣಾ ಪತ್ರ ಸಿಕ್ಕಿದ್ದು, 93.25 ಎಕರೆಯಲ್ಲಿ ಲಕ್ಷಾಂತರ ಟನ್‌ ಮರಳು ಲಭ್ಯವಿರುವುದಾಗಿ ಅಂದಾಜಿಸಲಾಗಿದೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)