ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಮನು ಶಬ್ದ ಬಳಕೆ ಅಂಬೇಡ್ಕರ್‌ಗೆ ಅವಮಾನ: ಡಾ.ಮಹಾಬಲೇಶ್ವರ ರಾವ್

ಡಾ.ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ ಡಾ.ಮಹಾಬಲೇಶ್ವರ ರಾವ್
Last Updated 18 ಏಪ್ರಿಲ್ 2023, 15:45 IST
ಅಕ್ಷರ ಗಾತ್ರ

ಉಡುಪಿ: ವರ್ಣಾಶ್ರಮ ಧರ್ಮ, ಜಾತೀಯ ತಾರತಮ್ಯ ಹಾಗೂ ಮಾನವರಲ್ಲಿ ಮೇಲು ಕೀಳು ಎಣಿಸುವ ಮನುಸ್ಮೃತಿಯನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಸಾವಿರಾರು ಅನುಯಾಯಿಗಳ ಸಮಕ್ಷಮದಲ್ಲಿ ಬೆಂಕಿಗೆ ಹಾಕಿ ಸುಟ್ಟಿರುವಾಗ ಅಂಬೇಡ್ಕರ್ ಅವರನ್ನು 'ಆಧುನಿಕ ಮನು' ಎಂದು ಸಂಬೋಧಿಸುವುದು ಅವಮಾನಕರ ಎಂದು ಡಾ.ಮಹಾಬಲೇಶ್ವರ ರಾವ್ ಅಭಿಪ್ರಾಯಪಟ್ಟರು.

ಡಾ.ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ, ಅಂಬೇಡ್ಕರ್ ದಲಿತ ಸೂರ್ಯ ಮತ್ರವಲ್ಲ; ಜಗತ್ತಿನ ಎಲ್ಲ ಶೋಷಿತರ ಸೂರ್ಯ ಎಂದು ನುಡಿದರು.

ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರಶಾಂತ ನೀಲಾವರ ಮಾತನಾಡಿ, ದೇಶದ ಸಂವಿಧಾನದಲ್ಲಿ ಗಾಂಧೀಜಿಯವರ ರಾಮರಾಜ್ಯದ ಕಲ್ಪನೆ, ಪಟೇಲರ ರಾಷ್ಟ್ರದ ಅಖಂಡತೆಯ ಕಲ್ಪನೆ, ನೆಹರೂ ಅವರ ಮತ ನಿರಪೇಕ್ಷತೆ ಹಾಗೂ ಸಮಾಜವಾದಿ ದೃಷ್ಟಿ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಹಾಗೂ ಸರ್ವ ಸಮಾನತೆಯ ಕಲ್ಪನೆ ಎರಕಗೊಂಡಿವೆ.ಭಾರತದ ಸುದೀರ್ಘವಾದ ಪ್ರಜಾಪ್ರಭುತ್ವವಾದಿ ಚರಿತ್ರೆಗೆ ಅಂಬೇಡ್ಕರ್ ರೂಪಿಸಿದ ಸಂವಿಧಾನವೇ ಕಾರಣ ಎಂದರು. ಎಂದರು.

ಕಾರ್ಯಕ್ರಮದಲ್ಲಿ ಸಾಗರ್ ಅತಿಥಿಗಳನ್ನು ಪರಿಚಯಿಸಿದರು. ಲತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT