ಚೇರ್ಕಾಡಿ (ಬ್ರಹ್ಮಾವರ): ‘ಪ್ರಜಾಪ್ರಭುತ್ವದ ಅಸಲಿ ಪ್ರಯೋಗಾಲಯ ಇರುವುದು ಶಾಸನ ಸಭೆಗಳಲ್ಲಿ ಅಲ್ಲ. ಶಾಲೆಯ ನಾಲ್ಕು ಗೋಡೆಯ ಮಧ್ಯೆ ಪ್ರಜಾಪ್ರಭುತ್ವದ ಅಸಲಿ ಮೌಲ್ಯಗಳು ನಿರ್ಧಾರವಾಗುತ್ತವೆ. ಶಿಕ್ಷಕರೇ ಸಂವಿಧಾನದ ರಕ್ಷಕರು’ ಎಂದು ಭಾರತೀಯ ಸೇನೆಯ ಎನ್ಸಿಒ ಹವಾಲ್ದಾರ್ ಸುರೇಶ ಸಿ. ರಾವ್ ಹೇಳಿದರು.

ಚೇರ್ಕಾಡಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಂವಿಧಾನವು ಅನೇಕ ಶತಮಾನಗಳಿಂದ ಶೋಷಣೆಯಿಂದ ಬಳಲಿದ್ದ ಕೋಟ್ಯಾಂತರ ಭಾರತೀಯರ ಅಸ್ಮಿತೆಯ ಘೋಷಣೆ. ಪ್ರತಿಯೊಬ್ಬರ ಕಣ್ಣೀರು ಒರೆಸುವ ಭರವಸೆಯ ಹಸ್ತ, ಆಶಾಕಿರಣ. ಭವ್ಯ ಭಾರತದ ಬೆನ್ನೆಲುಬು ಎಂದರು.

ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾರಾವಿ ದಿನೇಶ ಹೆಗ್ಡೆ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಉಡುಪಿ ಸಂಚಾಲನ ಸಮಿತಿ ಅಧ್ಯಕ್ಷ ಸಾಧು ಸಾಲಿಯಾನ್, ಕಾರ್ಯದರ್ಶಿ ರಿಷಿರಾಜ್, ರಾಷ್ಟ್ರೋತ್ಥಾನ ಪರಿಷತ್ತಿನ ಸಾಮಾನ್ಯ ಸಮಿತಿ ಸದಸ್ಯ ಮಿಥುನ್ ಕುಂದರ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮುಖ್ಯಶಿಕ್ಷಕಿ ಪೂರ್ಣಿಮಾ ಎಸ್.ಡಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ, ಆಡಳಿತ ಅಧಿಕಾರಿ ಸುರೇಶ ಹೆಜಮಾಡಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಾದ ಧಾನ್ವಿ ಸ್ವಾಗತಿಸಿದರು. ಲೀಲಾವತಿ ವಂದಿಸಿದರು. ಕೌಶಿಕ್, ಸಂಭ್ರಮ ನೆಲ್ಲಿ ನಿರೂಪಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ಸಮೂಹ ಗಾಯನಗಳು, ಸಮೂಹ ನೃತ್ಯಗಳು, ಸಾಹಸಮಯ ಚಟುವಟಿಕೆಗಳು, ಕರಾಟೆ ಪ್ರದರ್ಶನ ಮೂಡಿಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.