ಕುಂದಾಪುರ (ಉಡುಪಿ): ಕಾಸರಗೋಡಿನ ಧರ್ಮತ್ತಡ್ಕದ ವಿಜ್ಞಾನಿ ರಾಮ.ಬಿ.ಭಟ್ (83) ವಯೋಸಹಜ ಅಸ್ವಸ್ಥತೆಯಿಂದ ಭಾನುವಾರ ಕೆನಡಾದ ಟೊರೆಂಟೋದಲ್ಲಿ ನಿಧನರಾದರು. ಅವರಿಗೆ ಪತ್ನಿ ಪಾರ್ವತಿ ಭಟ್, ಮಕ್ಕಳಾದ ಡಾ.ಮಮತಾ ಭಟ್ ಮತ್ತು ಡಾ.ಅಪರ್ಣಾ ಭಟ್ ಇದ್ದಾರೆ.

ಎಂ.ಟೆಕ್. ಪದವಿಯ ನಂತರ ‘ನಾದ ಮತ್ತು ಕಂಪನ’ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದ ಅವರು, ತಿರುವನಂತಪುರಂ ಸಮೀಪದ ರಾಕೆಟ್ ಉಡಾವಣಾ ಕೇಂದ್ರ ಹಾಗೂ ಅಮೆರಿಕದ ನಾಸಾದಲ್ಲಿ ಸೇವೆ ಸಲ್ಲಿಸಿದ್ದರು. ಕೆನಡಾದ ಮಾಂಟ್ರಿಯಲ್ನ ಕಾನ್ಕಾರ್ಡಿಯಾ ಯುನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಡೀನ್ ಆಗಿ ಕಾರ್ಯ ನಿರ್ವಹಿಸಿದ್ದರು. ನೂರಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.

ನಾದ ಮತ್ತು ಕಂಪನ ಕುರಿತು ಇವರು ಬರೆದ 200ಕ್ಕೂ ಮಿಕ್ಕಿದ ಸಂಶೋಧನಾ ಪ್ರಬಂಧಗಳು ಅಂತರರಾಷ್ಟ್ರೀಯ ಜರ್ನಲ್ಗಳಲ್ಲಿ ಪ್ರಕಟವಾಗಿವೆ. ಬಾಳಿಕೆ ರಾಮ ಭಟ್ ಕಾವ್ಯನಾಮದಲ್ಲಿ ಪುಸ್ತಕ ಪ್ರಕಟಿಸಿದ್ದಾರೆ.

‘ನನಗೆ ಇರಲಿ ಬಾಳಿಕೆ’ ಕವನ ಸಂಕಲನ, ‘ನಾದ’ ವಿಜ್ಞಾನ ಲೇಖನ, ಬಾಳಿಕೆಯಿಂದ ಕೆನಡಾಕ್ಕೆ’ ಅನುಭವ ಕಥನ, ಇಂಗ್ಲಿಷ್ನಲ್ಲಿ ‘ದಿ ಡಿವೈನ್ ಆಂಜನೇಯ’ ಮತ್ತು ‘ಝುವಾಂಗ್ ಜಾಂಗ್ಸ್ ಜರ್ನಿ ಟು ದ ವೆಸ್ಟ್’ ಎರಡು ಕಾದಂಬರಿಗಳು ಪ್ರಕಟಗೊಂಡಿವೆ. ಮೃತರು, ಲೇಖಕಿ ಪಾರ್ವತಿ ಜಿ ಐತಾಳ್ ಅವರ ಸಹೋದರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.