ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾಭಾವದಿಂದ ಸಹಬಾಳ್ವೆ: ಎಂ.ಕೆ ವಿಜಯ್ ಕುಮಾರ

Last Updated 13 ಸೆಪ್ಟೆಂಬರ್ 2022, 6:00 IST
ಅಕ್ಷರ ಗಾತ್ರ

ಕಾರ್ಕಳ: ಸೇವಾಮೋಭಾವ ಬೆಳೆಸಿಕೊಂಡಾಗ ಸಹಬಾಳ್ವೆ ಸಾಧ್ಯ ಎಂದುಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಅಧ್ಯಕ್ಷ ಎಂ.ಕೆ ವಿಜಯ್ ಕುಮಾರ ಹೇಳಿದರು.

ತಾಲ್ಲೂಕಿನ ಬಜಗೋಳಿ ಸೇಕ್ರೆಡ್ ಹಾರ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸೇವಾಮೋಭಾವನೆ ಬೆಳೆಸಿಕೊಂಡಾಗ ಮಾನವೀಯತೆ, ಹೃದಯವಂತಿಕೆ ಹಾಗೂ ಪರೋಪಕಾರ ಗುಣವನ್ನು ಅರಿತುಕೊಳ್ಳುವರು. ಆ ಮೂಲಕ ಸಹಕಾರ ಸಹಬಾಳ್ವೆಯ ಬದುಕಿನ ಮಹತ್ವವನ್ನು ತಿಳಿಯುವರು. ದೇಶಪ್ರೇಮ ವಿದ್ಯಾರ್ಥಿ ಜೀವನದಲ್ಲೇ ಅಳವಡಿಸಿಕೊಂಡಾಗ ಆದರ್ಶ ವ್ಯಕಿತ್ವದ ಮೂಲಕ ಎಲ್ಲರಿಗೂ ಪ್ರೇರಣೆಯಾಗಬಹುದು ಎಂದು ಅವರು ಹೇಳಿದರು.

ಸ್ಕೌಟ್ಸ್ ಅಂಡ್ ಗೈಡ್ಸ್‌ ಸಹಾಯಕ ಜಿಲ್ಲಾ ಆಯುಕ್ತೆ ವೃಂದಾ ಹರಿಪ್ರಕಾಶ್ ಶೆಟ್ಟಿ, ಜಿಲ್ಲಾ ಸಹಾಯಕ ಆಯುಕ್ತೆ ರಮಿತಾ ಶೈಲೇಂದ್ರ, ವರ್ಧಮಾನ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಹೆಗ್ಡೆ, ಸೇಕ್ರೆಡ್ ಹಾರ್ಟ್ ಶಾಲಾ ಮುಖ್ಯ ಶಿಕ್ಷಕಿ ಸಿ. ರೋಸ್ಲಿನ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ನೀರಿಕ್ಷಾ ರಾಜೇಶ್ ಇದ್ದರು.

ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ ಪೈ, ಸಂಸ್ಥೆಯ ಉಪಾಧ್ಯಕ್ಷ ಜಗದೀಶ್ ಹೆಗ್ಡೆ ಮಾತನಾಡಿದರು. ಕಾರ್ಯದರ್ಶಿ ಗಣೇಶ್ ಜಾಲ್ಸೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ನವೀನ್ ಎ ಸ್ವಾಗತಿಸಿದರು. ಗೈಡ್ ಶಿಕ್ಷಕಿ ಶಶಿಕಲಾ ಶೆಟ್ಟಿ ನಿರೂಪಿಸಿದರು. ಶಿಕ್ಷಕಿ ಅನಿತಾ ಪಿಂಟೊ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT