ಭಾನುವಾರ, ಜೂನ್ 20, 2021
25 °C
ಕಠಿಣ ಲಾಕ್‌ಡೌನ್ ನಿಯಮ ಹಿನ್ನೆಲೆಯಲ್ಲಿ ಸ್ಥಳ ಬದಲಾವಣೆ: ನಿಗದಿತ ದಿನ ಕಾರ್ಯಕ್ರಮ

ಹಿರಿಯಡ್ಕದ ಮೂಲ ಮಠದಲ್ಲಿ ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ಅನಿರುದ್ಧ ಸರಳತ್ತಾಯ ಅವರ ಸನ್ಯಾಸ ಸ್ವೀಕಾರ ಹಾಗೂ ಪಟ್ಟಾಭಿಷೇಕ ಶಿರಸಿಯ ಸೋಂದಾ ಕ್ಷೇತ್ರದ ಬದಲಾಗಿ ಉಡುಪಿಯ ಹಿರಿಯಡ್ಕದ ಶೀರೂರು ಮೂಲಮಠದಲ್ಲಿ ನಡೆಯಲಿದೆ ಎಂದು ಸೋದೆ ಮಠದ ಸಿಬ್ಬಂದಿ ತಿಳಿಸಿದ್ದಾರೆ.

ಕೋವಿಡ್‌ ಎರಡನೇ ಅಲೆ ತಡೆಗೆ ಸರ್ಕಾರದ ಕಠಿಣ ಮಾರ್ಗಸೂಚಿ ಪಾಲನೆ ಮಾಡಬೇಕಿರುವ ಕಾರಣ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸನ್ಯಾಸಾಶ್ರಮ ಸ್ವೀಕರಿಸುವ ವಟು ಈಗಾಗಲೇ ಪುಣ್ಯಕ್ಷೇತ್ರಗಳಿಗೆ ಭೇಟಿನೀಡಿ ದೇವರ ದರ್ಶನ ಪೂರ್ಣಗೊಳಿಸಿ ಅಷ್ಟಮಠಗಳ ಯತಿಗಳ ಆಶೀರ್ವಾದ ಪಡೆದು ಫಲ ಮಂತ್ರಾಕ್ಷತೆ ಸ್ವೀಕರಿಸಿದ್ದಾರೆ. ಹಿಂದೆ, ಸಂಕಲ್ಪ ಮಾಡಿದಂತೆ ಮೇ 11 ರಿಂದ 14ರವೆರೆಗೆ ಸೋಂದಾ ಕ್ಷೇತ್ರದ ಬದಲಾಗಿ ಹಿರಿಯಡ್ಕದ ಶೀರೂರು ಮೂಲಮಠದಲ್ಲಿ ಧಾರ್ಮಿಕ ವಿಧಿವಿಧಾನಗಳ ಪ್ರಕಾರಗಳಂತೆ ನಡೆಯಲಿದೆ ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು