ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಆಯೋಗದ ಅಂಗಳಕ್ಕೆ ಆರ್‌.ಆರ್‌.ನಗರ ಚುನಾವಣೆ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಪತ್ತೆಯಾಗಿರುವ ಮತದಾರರ ಗುರುತಿನ ಚೀಟಿಗಳ ಅಕ್ರಮ ಸಂಗ್ರಹ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಕ್ಷೇತ್ರದ ಚುನಾವಣೆ ಮುಂದೂಡಿಕೆ ವಿಷಯ ಈಗ ಕೇಂದ್ರ ಚುನಾವಣಾ ಆಯೋಗದ ಅಂಗಳಕ್ಕೆ ತಲುಪಿದೆ.

ಜಾಲಹಳ್ಳಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಿಕ್ಕಿರುವ 9,746 ಗುರುತಿನ ಚೀಟಿಗಳ ಪ್ರಕರಣವನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಉಪ ಚುನಾವಣಾ ಆಯುಕ್ತ ಚಂದ್ರಭೂಷಣ ಕುಮಾರ್ ಅವರು ಗುರುತಿನ ಚೀಟಿಗಳು ಪತ್ತೆಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಮತದಾನ ಮುಂದೂಡಿಕೆ ಕುರಿತು ಮುಖ್ಯ ಚುನಾವಣಾ ಆಯುಕ್ತರೇ ತೀರ್ಮಾನವನ್ನು ಪ್ರಕಟಿಸಲಿದ್ದಾರೆ ಎಂದೂ ಅವರು ಹೇಳಿದರು.

‘ಪತ್ತೆಯಾದ ಎಲ್ಲ ಗುರುತಿನ ಚೀಟಿಗಳು ಚುನಾವಣಾ ಆಯೋಗದ ಬಳಿ ಇವೆ. ಅವರೆಲ್ಲರೂ ಮತ ಚಲಾಯಿಸಬಹುದು. ಆದರೆ, ಆಯೋಗ ಸೂಚಿಸಿರುವ ಪರ್ಯಾಯ ಗುರುತಿನ ಚೀಟಿಗಳನ್ನು ಬಳಸಿಕೊಂಡು ಮತದಾನ ಮಾಡಬಹುದು’ ಎಂದು ಸ್ಪಷ್ಟಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಚುನಾವಣಾ

ಧಿಕಾರಿಗಳು ಜಾಲಹಳ್ಳಿ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ಮುನಿರತ್ನ ಸೇರಿ 14 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಮುನಿರತ್ನ, ಸಾದಿರ್ ಮೊಮಿನ್, ಚಿನ್ನತಂಬಿ, ಪೊನ್ನಯ್ಯಮ್ಮ, ಚಿನ್ನ ದೊರೈ, ಲಕ್ಷ್ಮಮ್ಮ, ಲಲಿತಮ್ಮ, ಶಾರದ ಸರವಣ, ರೇಖಾ, ಮಂಜುಳಾ ನಂಜಾ
ಮರಿ, ನಟರಾಜ್ ಕೃಷ್ಣಪ್ಪ‍, ಮಂಜುನಾಥ್ ಹಾಗೂ ರಶ್ಮಿ ಎಂಬುವರ ವಿರುದ್ಧ ಅಪರಾಧ ಸಂಚು (ಐಪಿಸಿ 120) ಹಾಗೂ ಜನಪ್ರತಿನಿಧಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿವೆ. ಮುನಿರತ್ನ 14ನೇ ಆರೋಪಿಯಾಗಿದ್ದಾರೆ. ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡುವುದಿಲ್ಲ’ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎಂ.ಮಹೇಶ್ವರ ರಾವ್ ಹೇಳಿದರು.

ಬಿಜೆಪಿ ಕೈವಾಡ–ಮುನಿರತ್ನ: ‘ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುತಿನ ಚೀಟಿ ಸಿಕ್ಕಿರುವ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ ’ ಎಂದು ಶಾಸಕ ಮುನಿರತ್ನ ತಿಳಿಸಿದರು.

‘ನನ್ನ ಫೋಟೋ ಇರುವ ವಾಟರ್ ಕ್ಯಾನ್‌ ಮತ್ತು ಕರಪತ್ರ ಇದೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ’ ಎಂದು ಹೇಳಿದರು.

‘ಕೊಳೆಗೇರಿಯ ನಿವಾಸಿಗಳಾದ ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯಕ್ಕೆ ಸೇರಿದವರ ಗುರುತಿನ ಚೀಟಿಗಳು ಇವಾಗಿವೆ. ಅವುಗಳನ್ನು ಪಡೆಯುವ ಅವಶ್ಯ ನಮಗೆ ಇಲ್ಲ. ಅಂತಹ ಕೆಲಸ ಮಾಡುವುದು ಬಿಜೆಪಿಯವರ ಅಭ್ಯಾಸ. ಹಿಂದೆ ಹೆಬ್ಬಾಳ ಕ್ಷೇತ್ರದಲ್ಲೂ ಇದನ್ನೇ ಅವರು ಮಾಡಿದ್ದರು’ ಎಂದು ಅವರು ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT