ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೂ ಮಾಡಬಹುದಲ್ಲ?

Last Updated 7 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕೆ ಬಂದಿದ್ದ ಭಕ್ತರು ಆಹಾರ ಪದಾರ್ಥವನ್ನು ವ್ಯರ್ಥ ಮಾಡದಂತೆ ಅಲ್ಲಿನ ಕಾರ್ಯಕರ್ತರು ನಿರ್ವಹಿಸಿದ ಕೆಲಸವನ್ನು ಸಹನಾ ಕಾಂತಬೈಲು ಅವರು ಶ್ಲಾಘಿಸಿದ್ದಾರೆ (ವಾ.ವಾ., ಮಾ. 3).

ಆಹಾರ ಪದಾರ್ಥ ವ್ಯರ್ಥವಾಗದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ ಎನ್ನುವುದನ್ನು ನಾವ್ಯಾರೂ ಮರೆಯಬಾರದು. ಅದು ಯಾವುದೇ ರೂಪದಲ್ಲಿ ಆಗಿರಬಹುದು ಎನ್ನುವುದು ನನ್ನ ಭಾವನೆ. ಉದಾಹರಣೆಗೆ ಮಹಾಮಸ್ತಕಾಭಿಷೇಕದಲ್ಲಿ ಗೊಮ್ಮಟ ಮೂರ್ತಿಯ ತಲೆಯ ಮೇಲಿಂದ ಸುರಿವ ಸಾವಿರಾರು ಕೊಡ ನೀರು, ಎಳನೀರು, ಹಾಲು, ಮೊಸರು, ತುಪ್ಪ, ಜೇನು, ಟನ್‌ಗಟ್ಟಲೆ ಸುರಿವ ಸಕ್ಕರೆ, ದ್ರಾಕ್ಷಿ, ಗೋಡಂಬಿ, ಹಣ್ಣು-ಹಂಪಲಗಳು ವ್ಯರ್ಥವಾಗಿ ಮಣ್ಣು ಸೇರುವುದು ಸರಿಯೇ? ಒಂದು ಕ್ಷಣ ಯೋಚಿಸಿ. ಸಕಲ ವೈಭೋಗಗಳನ್ನು ತೊರೆದು ನಡೆದ ವೈರಾಗಿ, ಮಹಾತ್ಯಾಗಿ ಬಾಹುಬಲಿ ಇದನ್ನೆಲ್ಲಾ ಬೇಡುವನೇ? ಅದೇ ಪದಾರ್ಥವನ್ನು ಅಪೌಷ್ಟಿಕತೆಯಿಂದ ಬಳಲುವವರಿಗೆ ಹಂಚಿ, ಭಕ್ತಿಯಿಂದ ನಮಿಸಿದರೆ ಆ ಮಹಾಯೋಗಿ ತಣಿಯಲಾರನೇ?

ಅಭಿಷೇಕ ನೋಡಲು ಲಕ್ಷಾಂತರ ಮಂದಿ ಕಾತರಿಸುವುದು ಸರಿಯಷ್ಟೆ. ಅವರ ಕಾತರ ತಣಿಸಲು ತಂತ್ರಜ್ಞಾನದ ಸಹಾಯದಿಂದ ಗೊಮ್ಮಟ ಮೂರ್ತಿಯ ಮೇಲೆ ಬಣ್ಣ ಬಣ್ಣದ ಲೇಸರ್ ಬೆಳಕಿನ ವ್ಯವಸ್ಥೆಯನ್ನು ಮಾಡಬಹುದು. ಇದರಿಂದ ಅಭಿಷೇಕದ ಆನಂದವನ್ನು ಕಣ್ತುಂಬಿಕೊಳ್ಳಬಹುದು. ಹಾಗೆಯೇ, ಗೊಮ್ಮಟನ ಚಿಕ್ಕದಾದ ಮೂರ್ತಿಯನ್ನು ದೊಡ್ಡ ಹರಿವಾಣದಲ್ಲಿಟ್ಟು ಎಲ್ಲಾ ಪದಾರ್ಥಗಳಿಂದಲೂ ಅಭಿಷೇಕ ಮಾಡಬಹುದು. ಇದರಿಂದ ಶಾಸ್ತ್ರೋಕ್ತವಾಗಿ ಅಭಿಷೇಕವನ್ನೂ ನೆರವೇರಿಸಿದಂತಾಗುತ್ತದೆ. ಜತೆಗೆ ಆಹಾರ ಪದಾರ್ಥ ವ್ಯರ್ಥವಾಗುವುದನ್ನೂ ತಡೆಯಬಹುದಲ್ಲವೇ?

– ಕೆ.ಸಿ. ರತ್ನಶ್ರಿ ಶ್ರೀಧರ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT