ಶಿರ್ವ: ಪಡುಕುತ್ಯಾರು ಆನೆಗುಂದಿ ಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರ 16ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಮಂಗಳವಾರ ನಡೆಯಿತು.

ವರ್ಧಂತಿ ಉತ್ಸವದ ಅಂಗವಾಗಿ ಸಾಮೂಹಿಕ ಚಂಡಿಕಾ ಯಾಗ ಸೇರಿ ವಿವಿಧ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ, ಆನೆಗುಂದಿ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಯುವ ಶಿಲ್ಪಿಗಳಿಗೆ ಅಭಿನಂದನಾ ಕಾರ್ಯಕ್ರಮಗಳು ನಡೆದವು.

ಶ್ರೀಕರಾರ್ಚಿತ ದೇವತಾ ಪೂಜೆಯ ಬಳಿಕ, ವಿಭೂಷಿತ ನಾಗಧರ್ಮೇಂದ್ರ ಸರಸ್ವತಿ ಸ್ವಾಮೀಜಿ ವೃಂದಾವನದಲ್ಲಿ ಪೂಜೆ ನಡೆಯಿತು. ಇದೇ ವೇಳೆ ವರ್ಷವಿಡೀ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ದೇವಸ್ಥಾನಗಳಿಂದ ವಾರ್ಷಿಕ ಗುರುಕಾಣಿಕೆ ಸಮರ್ಪಣೆ ನಡೆಯಿತು.

ನೂತನ ಸರಸ್ವತಿ ಹೌಸಿಂಗ್ ಸೊಸೈಟಿ ಯೋಜನೆಯನ್ನು ಲೋಕಾರ್ಪಣೆ ಮಾಡಲಾಯಿತು. ಪಡುಕುತ್ಕಾರಿನ ಸರಸ್ವತಿ ಯಾಗಶಾಲೆಯಲ್ಲಿ ವಿಶ್ವಕರ್ಮ ಯಜ್ಞ, ದಕ್ಷಿಣಾಮೂರ್ತಿ ಯಜ್ಞ, ರುದ್ರ ಯಜ್ಞ ಹಾಗೂ ಸಾಮೂಹಿಕ ಚಂಡಿಕಾ ಯಾಗದ ಪೂರ್ಣಾಹುತಿ, ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಶ್ರೀಗಳ ಪಾದಪೂಜೆ, ಆಯಾ ದೇವಸ್ಥಾನಗಳ ವಾರ್ಷಿಕ ಗುರುಕಾಣಿಕೆ ಸಮರ್ಪಣೆ ಮತ್ತು ಫಲ ನ್ಯಾಸ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ತುಮಕೂರಿನ ನಾಗಭೂಷಣ ಆಚಾರ್ಯ (ಶಿಲ್ಪಕಲೆ), ಮಂಗಳೂರಿನ ಜ್ಯೋತಿಷಿ ಸಿ.ವಿ.ಪೊದುವಾಳ್ (ಜ್ಯೋತಿಷ್ಯ), ನೇಜಾರು ವಾದಿರಾಜ ಆಚಾರ್ಯ (ಸಾಮಾಜಿಕ ಸೇವೆ), ಮಂಗಳೂರಿನ ಎಸ್.ಪಿ.ಗುರುದಾಸ್, (ಹರಿದಾಸ ಸೇವೆ), ಮೂಡಬಿದಿರೆ ವಿಶ್ವೇಶ್ವರ ಪುರೋಹಿತ್ (ವೈದಿಕ), ಡಾ.ಕೃಷ್ಣ ಆಚಾರ್ಯನ ಕಾರ್ಕಳ (ಶಿಲಾಶಿಲ್ಪ ವಿಭಾಗ), ಶಿಲ್ಪಿ ದೇವಿದಾಸ್ ಆಚಾರ್ಯ, ತ್ರಿಶೂರು, ಕೇರಳ (ವಾಸ್ತುಶಿಲ್ಪ) ಅವರಿಗೆ ಆನೆಗುಂದಿ ಕಾಳಹಸ್ತೇಂದ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯುವ ಪ್ರತಿಭೆಗಳಾದ ಕಡೂರಿನ ಪ್ರಮೋದ್ ಸಿ.ಕೆ., ಪುತ್ತೂರಿನ ಮನೋಜ್ಞ ಟಿ.ಆಚಾರ್ಯ ಅವರನ್ನು ಗೌರವಿಸಲಾಯಿತು.

ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಲೋಹಶಿಲ್ಪಿ ಹೊನ್ನಪ್ಪಾಚಾರ್ ಅವರಿಗೆ ಹಾಗೂ ವಾಸ್ತು ಪಿತಾಮಹ ಸರ್ವಸಿದ್ಧಿ ಕುಂಭಕೋಣಂನ ಪ್ರಭಾಕರ ಗೋವಿಂದ ಆಚಾರ್ಯ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹುಬ್ಬಳ್ಳಿಯ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯ ಈ.ಭೀಮಸೇನ ಬಡಿಗೇರ ಅವರಿಗೆ ಚಾಳುಕ್ಯ ಶಿಲ್ಪಿ ಲಿಪಿಕಾರ ಅಕ್ಷರಮೇರು ದಾಮೋದರಾಚಾರಿ ಸಾಹಿತ್ಯ ಸರಸ್ವತಿ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು. ಮಹಾಶಿಲ್ಪಿ ಗುಂಡನ್ ಅನಿವಾರಿತಾಚಾರಿ ತ್ರಿಭುವನಾಚಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಕಲಬುರಗಿಯ ಶಿಲ್ಪಿ ಮಾನಯ್ಯ ಎನ್.ಬಡಿಗೇರ ಅವರಿಗೆ ನೀಡಲಾಗುವುದು ಎಂದು ಘೋಷಿಸಲಾಯಿತು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಸಮಾಜದೊಂದಿಗೆ ಮಠ ಮಂದಿರಗಳ ನೇರ ಸಂಪರ್ಕವಿದ್ದಾಗ ಉತ್ತಮ ಸಂಸ್ಕಾರಯುತ ಸಮಾಜವನ್ನು ಕಟ್ಟಲು ಸಾಧ್ಯ. ಪಡುಕುತ್ಯಾರಿನ ಮಠದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರ ಧಾರೆಗಳನ್ನು ಕಲಿಸಿಕೊಡುವ ಮೂಲಕ ವಿಶ್ವಕರ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿ ದ್ದರು. ಪಿ.ಸುಜ್ಞಾನ ಮೂರ್ತಿ, ನಿಲೇಶ್ ವಿಶ್ವಕರ್ಮ, ಪ್ರೊ.ಪ್ರಿಯಾಂಕ ನಿಲೇಶ್ ವಿಶ್ವಕರ್ಮ ಭಾಗವಹಿಸಿದ್ದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-28-1312276726

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.