ಶಿರ್ವ: ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರ 16ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯುತ್ಸವವು ಮೇ 12ರಂದು ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ನಡೆಯಲಿದೆ.

ವರ್ಧಂತಿ ಉತ್ಸವದ ಅಂಗವಾಗಿ ಸಾಮೂಹಿಕ ಚಂಡಿಕಾ ಯಾಗ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಆನೆಗುಂದಿ ಶ್ರೀ ಪ್ರಶಸ್ತಿ ವಿತರಣೆ ಹಾಗೂ ಯುವ ಶಿಲ್ಪಿಗಳಿಗೆ ಅಭಿನಂದನಾ ಕಾರ್ಯಕ್ರಮಗಳು ನಡೆಯಲಿವೆ. ಅಂದು ಬೆಳಿಗ್ಗೆ ಕಟಪಾಡಿಯ ಮಹಾಸಂಸ್ಥಾನದಲ್ಲಿ ಪಟ್ಟಾಭಿಷೇಕ ವರ್ಧಂತಿಗೆ ಸಂಬಂಧಿಸಿ ವೈದಿಕ ವಿಧಿಗಳು ನೆರವೇರಲಿವೆ.

ಶ್ರೀಕರಾರ್ಚಿತ ದೇವತಾ ಪೂಜೆಯ ಬಳಿಕ, ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತಿ ಸ್ವಾಮೀಜಿ ವೃಂದಾವನದಲ್ಲಿ ಪೂಜೆ, ನಂತರ ಪಡುಕುತ್ಯಾರಿನ ಸರಸ್ವತಿ ಯಾಗಶಾಲೆಯಲ್ಲಿ ವಿಶ್ವಕರ್ಮ ಯಜ್ಞ, ದಕ್ಷಿಣಾಮೂರ್ತಿ ಯಜ್ಞ, ರುದ್ರ ಯಜ್ಞ ಹಾಗೂ ಸಾಮೂಹಿಕ ಚಂಡಿಕಾ ಯಾಗದ ಪೂರ್ಣಾಹುತಿ, ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರುಗಳ ಪಾದಪೂಜೆ, ಮಹಾಸಂಸ್ಥಾನದ ಪ್ರಥಮ ವಿಶ್ವಸ್ಥರಾಗಿರುವ ದೇವಸ್ಥಾನಗಳ ಧರ್ಮದರ್ಶಿಗಳಿಂದ ಆಯಾ ದೇವಸ್ಥಾನಗಳ ವಾರ್ಷಿಕ ಗುರುಕಾಣಿಕೆ ಸಮರ್ಪಣೆ ಮತ್ತು ಫಲ ನ್ಯಾಸ ಕಾರ್ಯಕ್ರಮಗಳು ನಡೆಯಲಿವೆ.

ಇದೇ ಸಂದರ್ಭದಲ್ಲಿ ಜಗದ್ಗುರುಗಳ 50ನೇ ಜನ್ಮವರ್ಧಂತಿ ವರ್ಷಾಚರಣೆಯ ಅಂಗವಾಗಿ ಒಂದು ವರ್ಷದ ಕಾಲ ನಡೆಯಲಿರುವ ವಿವಿಧ ಕಾರ್ಯಕ್ರಮಗಳಿಗೆ ಔಪಚಾರಿಕ ಚಾಲನೆ ನೀಡಲಾಗುವುದು. ಕುಲಗುರು ಪೀಠ ಜಾಗೃತಿ ಹಾಗೂ ಸಾಂಸ್ಕೃತಿಕ ಪಂಚಪ್ರಬೋಧನ ಸಂಕಲ್ಪದ ‘ಸುವರ್ಣ ಸಂಕಲ್ಪ ಅಭಿಯಾನ’ ಪ್ರಾರಂಭೋತ್ಸವ, ಪಡುಕುತ್ಯಾರು ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಸರಸ್ವತಿ ಹೌಸಿಂಗ್ ಸೊಸೈಟಿ ಯೋಜನೆಯ ಲೋಕಾರ್ಪಣೆ ಇದೇ ಸಂದರ್ಭದಲ್ಲಿ ನೆರವೇರಲಿದೆ.

ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ಹುಬ್ಬಳ್ಳಿಯ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯ ಈ. ಭೀಮಸೇನ ಬಡಿಗೇರ ಅವರಿಗೆ ಚಾಳುಕ್ಯ ಶಿಲ್ಪಿ ಲಿಪಿಕಾರ ಅಕ್ಷರಮೇರು ದಾಮೋದರಾಚಾರಿ ಸಾಹಿತ್ಯ ಸರಸ್ವತಿ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು. ಮಹಾಶಿಲ್ಪಿ ಗುಂಡನ್ ಅನಿವಾರಿತಾಚಾರಿ ತ್ರಿಭುವನಾಚಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಕಲಬುರಗಿಯ ಕೊತ್ತನೂರು ಹಿರಿಯ ಶಿಲ್ಪಿ ಮಾನಯ್ಯ ಎನ್. ಬಡಿಗೇರ ಅವರಿಗೆ ನೀಡಲಾಗುವುದು. ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಲೋಹಶಿಲ್ಪಿ ಹೊನ್ನಪ್ಪಾಚಾರ್ ಅವರಿಗೆ ಹಾಗೂ ವಾಸ್ತು ಪಿತಾಮಹ ಸ್ವರ್ವಸಿದ್ಧಿ ಆಚಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಕುಂಭಕೋಣಂನ ಪ್ರಭಾಕರ ಗೋವಿಂದ ಆಚಾರ್ಯ ಅವರಿಗೆ ನೀಡಿ ಗೌರವಿಸಲಾಗುವುದು.

ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ವಿ. ಶ್ರೀಧರ ಆಚಾರ್ಯ ವಹಿಸಲಿದ್ದಾರೆ. ಪಿ. ಸುಜ್ಞಾನ ಮೂರ್ತಿ, ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ನಿಲೇಶ್ ವಿಶ್ವಕರ್ಮ, ಪ್ರೊ. ಪ್ರಿಯಾಂಕ ನಿಲೇಶ್ ವಿಶ್ವಕರ್ಮ ಭಾಗವಹಿಸಲಿದ್ದಾರೆ ಎಂದು ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-28-964151027

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.