ಉಡುಪಿ ಚಿಕ್ಕಮಗಳೂರು: ಶೋಭಾ ದಿಗ್ವಿಜಯ

ಭಾನುವಾರ, ಜೂನ್ 16, 2019
30 °C
ಶೋಭಾ ಪಡೆದ ಮತ–7,18,916, ಪ್ರಮೋದ್ ಪಡೆದ ಮತ–3,69,317

ಉಡುಪಿ ಚಿಕ್ಕಮಗಳೂರು: ಶೋಭಾ ದಿಗ್ವಿಜಯ

Published:
Updated:

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 3,49,599 ಮತಗಳ ಅಂತರದಿಂದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಪರಾಭವಗೊಳಿಸಿದರು.

ಒಟ್ಟು 21 ಸುತ್ತುಗಳ ಮತ ಎಣಿಕೆಯಲ್ಲಿ ಶೋಭಾ ಕರಂದ್ಲಾಜೆ 7,18,916 ಮತಗಳನ್ನು ಪಡೆದರು. ಪ್ರತಿಸ್ಪರ್ಧಿ ಪ್ರಮೋದ್ ಮಧ್ವರಾಜ್ 3,69,317 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು. 

2014ರ ಲೋಕಸಭಾ ಚುನಾವಣೆಯಲ್ಲೂ ಶೋಭಾ 1,81,643 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಾರಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದ್ದಾರೆ. ಕಣದಲ್ಲಿ 12 ಅಭ್ಯರ್ಥಿಗಳಿದ್ದರೂ ಬಿಎಸ್‌ಪಿಯ ಪರಮೇಶ್ವರ (15,947) ಅವರನ್ನು ಬಿಟ್ಟರೆ ಉಳಿದವರು 5 ಅಂಕಿಯ ಗಡಿ ದಾಟಲಿಲ್ಲ.

ಮತ ಎಣಿಕೆ ಸಾಗಿದ ಹಾದಿ:

ಮೊದಲ ಸುತ್ತಿನ ಮತ ಎಣಿಕೆಯಲ್ಲೇ ದೊಡ್ಡ ಮುನ್ನಡೆ ಪಡೆಯವ ಮೂಲಕ ಶೋಭಾ ಶುಭಾರಂಭ ಮಾಡಿದರು. ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಪ್ರತಿಯೊಂದು ಸುತ್ತಿನಲ್ಲೂ ಲೀಡ್ ಹೆಚ್ಚಿಸಿಕೊಳ್ಳುತ್ತಲೇ ಸಾಗಿದರು. ಪ್ರಮೋದ್ ಯಾವ ಸುತ್ತಿನಲ್ಲೂ ಮುನ್ನಡೆಯನ್ನು ಪಡೆಯಲಿಲ್ಲ. 

ಮೂರನೇ ಸುತ್ತಿನಲ್ಲಿ 1 ಲಕ್ಷ ಮತಗಳ ಗಡಿ ದಾಟಿದ ಶೋಭಾ, 5ನೇ ಸುತ್ತಿನಲ್ಲಿ 2 ಲಕ್ಷ, 7ನೇ ಸುತ್ತಿನಲ್ಲಿ 3 ಲಕ್ಷ, 10ನೇ ಸುತ್ತಿನಲ್ಲಿ 4 ಲಕ್ಷ, 12ನೇ ಸುತ್ತಿನಲ್ಲಿ 5 ಲಕ್ಷ, 14ನೇ ಸುತ್ತಿನಲ್ಲಿ 6 ಲಕ್ಷ, 18ನೇ ಸುತ್ತಿನಲ್ಲಿ 7 ಲಕ್ಷ ಮತಗಳ ಗಡಿಯನ್ನು ತಲುಪಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !