ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳಿಗೆ ಶಾಕ್‌ !

ಶನಿವಾರ, ಏಪ್ರಿಲ್ 20, 2019
28 °C
ಯಕ್ಷಗಾನ ಕಲಾವಿದ ನೀಲ್ಕೊಡು ಶಂಕರ ಹೆಗಡೆ ಅವರ ವೇಷ ನೋಡಿ ಹೌಹಾರಿದರು

ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳಿಗೆ ಶಾಕ್‌ !

Published:
Updated:
Prajavani

ಉಡುಪಿ: ಖ್ಯಾತ ಯಕ್ಷಗಾನ ಕಲಾವಿದ ನೀಲ್ಕೋಡು ಶಂಕರ ಹೆಗಡೆ ಅವರು ಸ್ತ್ರೀವೇಷಧಾರಿಯಾಗಿ ಕಾರು ಚಲಾಯಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗಿದೆ.‌

ಸ್ತ್ರೀವೇಷಧಾರಿಯಾಗಿ ಕಾರಿನಲ್ಲಿ ಹೋಗಬೇಕಾದ ಅನಿವಾರ್ಯತೆ ಹಾಗೂ ದಾರಿ ಮಧ್ಯೆಯ ಅನುಭವಗಳನ್ನು ನೀಲ್ಕೋಡು ಶಂಕರ ಹೆಗಡೆ  ಅವರು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ಯುಗಾದಿ ಹಬ್ಬದ ರಾತ್ರಿ ಗುಡೆಯಂಗಡಿಯಲ್ಲಿ ಯಕ್ಷಗಾನ ಪ್ರಸಂಗ ಮುಗಿಸಿ ಅಂಕೋಲದಲ್ಲಿ ಮತ್ತೊಂದು ಆಟಕ್ಕೆ ತೆರಳಬೇಕಿತ್ತು. ಅಲ್ಲಿಯೂ ಸ್ತ್ರೀವೇಷವೇ ಇತ್ತು. ಹಾಗಾಗಿ, ಮೇಕಪ್‌ ಬಿಚ್ಚುತ್ತಾ ಕೂತರೆ ತಡವಾಗುತ್ತದೆ ಎಂದು ಸ್ತ್ರೀವೇಷಧಾರಿಯಾಗಿಯೇ ಕಾರು ಚಲಾಯಿಸಿಕೊಂಡು ಹೊರಟೆ. ಮಾದನಗೆರೆ ಚೆಕ್‌ಪೋಸ್ಟ್‌ ಬಳಿ ಅಧಿಕಾರಿಗಳು ತಪಾಸಣೆಗಾಗಿ ಕಾರು ತಡೆದರು. ನನ್ನ ವೇಷ ನೋಡಿ ಹೌಹಾರಿ, ಅಚ್ಚರಿಪಟ್ಟರು. ಬಳಿಕ ವಿಷಯವನ್ನೆಲ್ಲ ತಿಳಿಸಿದ ಮೇಲೆ ನಿರಾಳರಾಗಿ ಒಂದೆರಡು ಫೋಟೊ ಕ್ಲಿಕ್ಕಿಸಿಕೊಂಡು ಬಿಟ್ಟರು’ ಎಂದು ಶಂಕರ ಹೆಗಡೆ ಅವರು ಹಾಸ್ಯ ಸನ್ನಿವೇಶವನ್ನು ಬಿಚ್ಚಿಟ್ಟರು. 

ಕಾರಿನೊಳಗೆ ಪತ್ನಿ ತೆಗೆದ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದೆ. ಫೋಟೊಗೆ ಬಹಳ ಮೆಚ್ಚುಗೆಗಳು ಬಂದಿವೆ ಎಂದು ನಗುತ್ತಲೇ ತಿಳಿಸಿದರು.

ಬರಹ ಇಷ್ಟವಾಯಿತೆ?

 • 37

  Happy
 • 8

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !