ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಟ್‌ಸಕ್ಯೂಟ್‌ನಿಂದ ವಿದ್ಯಾರ್ಥಿಗಳು ಕಂಗಾಲು

Last Updated 1 ಜುಲೈ 2022, 2:29 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ಶತಮಾನ ಪೂರೈಸಿದ ಉರ್ದು ಶಾಲೆಯ ಹಳೆ ಕಟ್ಟಡದಲ್ಲಿ ಮಳೆಯಿಂದ ಮಳೆ ನೀರು ತರಗತಿ ಕೊಠಡಿಯೊಳಗೆ ನೀರು ನುಗ್ಗಿದ ಘಟನೆ ನಡೆದಿದೆ.

ಮೇಲ್ಛಾವಣಿಯಿಂದ ಕೊಠಡಿಯೊಳಗೆ ನೀರು ಹರಿದು ಬಂದ ಪರಿಣಾಮ ವಿದ್ಯುತ್ ಶಾರ್ಟ್ ಸಕ್ಯೂಟ್ ಉಂಟಾಯಿತು. ಇದರಿಂದ ಹೆದರಿದ ಮಕ್ಕಳು ತರಗತಿ ಕೋಣೆಯೊಳಗೆ ತೆರಳಲು ಹಿಂಜರಿದು ಹೊರಗೆ ಕುಳಿತುಕೊಂಡಿದ್ದರು. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ
ಮಲ್ಲಾರು - ಪಕೀರಣಕಟ್ಟೆ ಪರಿಸರದ ರಿಕ್ಷಾ ಚಾಲಕರು ಶಾಲೆಗೆ ಆಗಮಿಸಿ, ಎಲ್ಲಾ ಮಕ್ಕಳನ್ನು ಉಚಿತವಾಗಿ ಶಾಲೆಗೆ ತಲುಪಿಸುವಲ್ಲಿ ಸಹಕರಿಸಿದರು.

ಮೌಲಾನಾ ಆಜಾದ್ ಶಾಲೆಯ ಕೊಠಡಿ ಕೋಣೆಗಳು ಬಿರುಕು ಬಿಟ್ಟು, ಗಾಳಿ ಮಳೆಯಿಂದಾಗಿ ಕೆಲವು ಕೋಣೆಗಳ ಮೇಲ್ಚಾವಣಿಯ ಹೆಂಚುಗಳು ಕೂಡಾ ಹಾರಿ ಹೋಗಿವೆ. ಇದರಿಂದಾಗಿ ಮೇಲ್ಚಾವಣಿ ಒಳಗಿನಿಂದ ಮತ್ತು ಬಿರುಕು ಬಿಟ್ಟಿರುವ ಗೋಡೆ ಹಾಗೂ ಕಿಟಕಿ
ಯೊಳಗಿಂದ ತರಗತಿ ಕೋಣೆ ಯೊಳಗೆ ಮಳೆ ನೀರು ತುಂಬಿಕೊಳ್ಳುವಂತಾಗಿದೆ.

ಪುರಸಭೆ ಸದಸ್ಯ ನೂರುದ್ದೀನ್, ಮಲ್ಲಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಧಿಕ್ಮಹಮ್ಮದ್, ಸಾಮಾಜಿಕ ಕಾರ್ಯಕರ್ತ
ರಶೀದ್ ನೇತೃತ್ವದಲ್ಲಿ ಕೊಠಡಿಯೊಳಗಿನ ನೀರು ತೆರವು ಮಾಡಲಾಗಿದೆ. ಗ್ರಾಮ ಕರಣಿಕ ಮಥಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT