ಭಾನುವಾರ, ಸೆಪ್ಟೆಂಬರ್ 25, 2022
29 °C
ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಶಿಕ್ಷಕರ, ಎಂಜಿನಿಯರ್‌ಗಳ ದಿನಾಚರಣೆ

ಧನಾತ್ಮಕ ಚಿಂತನೆಯಿಂದ ಅಭಿವೃದ್ಧಿ: ಶ್ರೀ ಪಡ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ಪ್ರತಿಯೊಬ್ಬರೂ ಕರ್ತವ್ಯಗಳನ್ನು ಅರಿತು ಧನಾತ್ಮಕ ಚಿಂತನೆಯೊಂದಿಗೆ ಕಾರ್ಯ ಕೈಗೊಂಡರೆ ಏಳಿಗೆ ಕಾಣಲು ಸಾಧ್ಯ ಎಂದು ಮಳೆಕೊಯ್ಲು ತಜ್ಞ, ಕೃಷಿಕ ಹಾಗೂ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ ಹೇಳಿದರು.

ತಾಲ್ಲೂಕಿನ ನಿಟ್ಟೆ ವಿಶ್ವವಿದ್ಯಾಲಯದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಶಿಕ್ಷಕರ ಹಾಗೂ ಎಂಜಿನಿಯರ್ ದಿನಾಚರಣೆಯಲ್ಲಿ ಮಾತನಾಡಿದ ಅವರು ಶಿಕ್ಷಕರು ಹಾಗೂ ಎಂಜಿನಿಯರ್‌ಗಳು ಸಮಾಜದ ವಿವಿಧ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಪರಿಹಾರ ಮಾರ್ಗಗಳನ್ನು ಕಾಣುವಲ್ಲಿ ಶ್ರಮವಹಿಸಿದರೆ ಅದೆಷ್ಟೋ ಸುಧಾರಣೆಗಳಿಗೆ ದಾರಿಯಾಗಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅವರು ಮಾತನಾಡಿ ಶಿಕ್ಷಣದೊಂದಿಗೆ ಜೀವನದ ಬಗೆಗೂ ತಿಳಿಹೇಳುವವನು ಗುರು ಎಂದು ಹೇಳಿದರು. ಪಿ.ಎಚ್.ಡಿ ಪದವಿ ಪಡೆದ ಡಾ. ಸ್ನೇಹಾ ನಾಯಕ್, ಡಾ.ಲೊಯೆಲ್ಲಾ ಕನ್ಸೆಪ್ಟಾ ಗೋವಿಯಸ್, ಡಾ. ಶೇಖ್ ಕಬೀರ್ ಅಹ್ಮದ್, ಡಾ. ರಂಜಿತ್ ಎ,  ಡಾ. ಪುಷ್ಪರಾಜ್, ಡಾ. ರಾಜು ಕೆ, ಡಾ. ರಘುನಂದನ್ ಕೆ.ಆರ್, ಡಾ. ಪ್ರದೀಪ್ ಕಾಂಚನ್, ಡಾ. ಸನ್ನಿಧಾನ್ ಎಂ.ಎಸ್, ಡಾ.ಕೃಷ್ಣ ರಾವ್, ಡಾ.ಗಿರೀಶ್ ಜೋಶಿ, ಡಾ. ಸುಕೇಶ್ ರಾವ್ ಎಂ, ಡಾ. ಶ್ರೀವಿದ್ಯಾ ಜಿ, ಡಾ. ಅನುಷಾ ಆರ್, ಡಾ. ಬೊಮ್ಮೇಗೌಡ ಕೆ.ಬಿ, ಡಾ. ಅಭೀರ್ ಭಂಡಾರಿ, ಡಾ. ಆಸ್ಟಿನ್ ದಿನೇಶ್ ಡಿಸೋಜಾ, ಡಾ. ವಿಶ್ವನಾಥ್ ಜೆ.ಎಸ್, ಡಾ. ದಿಲೀಪ್ ಕುಮಾರ್ ಕೆ, ಡಾ. ಕೃಷ್ಣಪ್ರಸಾದ್ ಎಸ್, ಡಾ. ಪಲ್ಲವಿ ಶೆಟ್ಟಿ, ಡಾ. ಸ್ಪೂರ್ತಿ ಬಿ ಶೆಟ್ಟಿ, ಡಾ. ಸರ್ವಜಿತ್ ಎಂ.ಎಸ್ ಮುಂತಾದವರು ಸನ್ಮಾನ ಸ್ವೀಕರಿಸಿದರು.

ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಂಶುಪಾಲ ಡಾ. ಐ ರಮೇಶ್ ಮಿತ್ತಂತಾಯ ಪರಿಚಯಿಸಿದರು. ಉಪಪ್ರಾಂಶುಪಾಲ ಡಾ. ಶ್ರೀನಿವಾಸ ರಾವ್ ಬಿ.ಆರ್ ಶಿಕ್ಷಕರನ್ನು ಪರಿಚಯಿಸಿದರು. ಡಾ. ನರಸಿಂಹ ಬೈಲ್ಕೇರಿ ವಂದಿಸಿದರು. ಸಹಪ್ರಾಧ್ಯಾಪಕ ಡಾ. ಜೊಯ್ ಮಾರ್ಟೀಸ್ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು