ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಜಿಲ್ಲೆಗೆ ರಜತ ಮಹೋತ್ಸವ: ನಾಳೆಯಿಂದ ರಾಜ್ಯವ್ಯಾಪಿ ರಥಯಾತ್ರೆ

ಆ.25ಕ್ಕೆ ರಾಜ್ಯಪಾಲರಿಂದ ರಜತ ಮಹೋತ್ಸವ ಉದ್ಘಾಟನೆ
Last Updated 23 ಆಗಸ್ಟ್ 2022, 18:59 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಜಿಲ್ಲೆ ರಚನೆಯಾಗಿ ಆಗಸ್ಟ್ 25ಕ್ಕೆ 25 ವರ್ಷ ತುಂಬುತ್ತಿರು ವುದರಿಂದ ಜಿಲ್ಲಾಡಳಿತದಿಂದ ಆ.25ರಿಂದ 2023ರ ಜ.25ರವರೆಗೆ ಸರಣಿ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆ.25ರಂದು ನಗರದ ಅಜ್ಜರಕಾಡಿನಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಕಾರ್ಯಕ್ರಮ ಉದ್ಘಾಟಿಸುವರು. ಅಂದು ಮಧ್ಯಾಹ್ನ ಬೋರ್ಡ್‌ ಹೈಸ್ಕೂಲ್‌ನಿಂದ ಜಾಥಾ ನಡೆಯಲಿದೆ. ಜಿಲ್ಲೆಯ ಬೆಳವಣಿಗೆಗೆ ಕಾರಣರಾದ ಅಂದಿನ ಹಾಗೂ ಇಂದಿನ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳನ್ನು ರಜತ ಮಹೋತ್ಸವದಲ್ಲಿ ಸನ್ಮಾನಿಸಲಾಗುತ್ತಿದೆ.ಜಿಲ್ಲೆಯ ಎಲ್ಲರೂ ರಜತ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ.

ಸಂಘ– ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸ್ಥಳೀಯ ದೇವಸ್ಥಾನಗಳ ಸಹ ಯೋಗದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ‘ಭವಿಷ್ಯದ ಉಡುಪಿ’ ಕಟ್ಟುವ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ. ರಜತೋತ್ಸವ ಲಾಂಛನ, ಹಾಡು, 25 ವರ್ಷಗಳ ಹಿಂದಿನ ಹಾಗೂ 25 ವರ್ಷಗಳ ನಂತರದ ಉಡುಪಿ ಪರಿಚಯಿಸುವ ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT