ಶನಿವಾರ, ಡಿಸೆಂಬರ್ 7, 2019
24 °C

ಮುಳುಗಿದ ದೋಣಿ: 9 ಮಂದಿ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕಾಪು ಸಮುದ್ರದ 30 ನಾಟಿಕಲ್ ಮೈಲ್‌ನಲ್ಲಿ ಶನಿವಾರ ಮೀನುಗಾರಿಕಾ ದೋಣಿ ಮುಳುಗಿದ್ದು, ದೋಣಿಯಲ್ಲಿದ್ದ 9 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಮಂಗಳೂರಿನ ಬಶೀರ್ ಎಂಬುವವರ ಮಾಲೀಕತ್ವದ ಎಸ್.‌ಎಂ. ಫಿಶರೀಸ್ ಹೆಸರಿನ ದೋಣಿ ಶುಕ್ರವಾರ ಮೀನುಗಾರಿಕೆಗೆ ತೆರಳಿತ್ತು. ಕಾಪು ಬಳಿ ದೋಣಿ ಮುಳುಗಲು ಆರಂಭಿಸಿದಾಗ ಸಮೀಪದಲ್ಲಿದ್ದ ಮತ್ತೊಂದು ಎಸ್.ಎಂ. ಫಿಶರೀಸ್ ದೋಣಿ ನೆರವಿಗೆ ಧಾವಿಸಿದೆ. ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)