ಮಂಗಳವಾರ, ಸೆಪ್ಟೆಂಬರ್ 28, 2021
25 °C

ವಿಶ್ವಚಾಂಪಿಯನ್‌ ಡಾನ್ಸ್‌ ಸ್ಪೋರ್ಟ್‌ನಲ್ಲಿ ಮಣಿಪಾಲದ ಅರ್ಚನಾ ಜೈವಿಠಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಆಸ್ಟ್ರಿಯಾದ ಗ್ರಾಜ್‌ನಲ್ಲಿ ಆ.20ರಿಂದ ಆರಂಭವಾಗಲಿರುವ ವಿಶೇಷ ಒಲಿಂಪಿಕ್ಸ್‌ ಡ್ಯಾನ್ಸ್‌ ಸ್ಪೋರ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಣಿಪಾಲದ ಅರ್ಚನಾ ಜೈವಿಠಲ್‌ ಭಾಗವಹಿಸುತ್ತಿದ್ದಾರೆ.

ಅರ್ಚನಾ ಜೈವಿಠಲ್‌ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ 90 ಸೆಕೆಂಡ್‌ಗಳ ಏಕ ವ್ಯಕ್ತಿ ಪ್ರದರ್ಶನ ನೀಡುತ್ತಿದ್ದಾರೆ. ಮಾಹೆ ಹಾಗೂ ಅರ್ಚನಾ ಟ್ರಸ್ಟ್‌ ಜಂಟಿಯಾಗಿ ವಿಶೇಷ ಮಕ್ಕಳಿಗಾಗಿ ಸ್ಥಾಪಿಸಿರುವ ಆಸರೆ ಸಂಸ್ಥೆಯಲ್ಲಿರುವ ಅರ್ಚನಾ, ಏಕವ್ಯಕ್ತಿ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಸ್ಪರ್ಧಿಯಾಗಿದ್ದಾರೆ.

ಆಸ್ಟ್ರಿಯಾ, ಚೆಕ್ ರಿಪಬ್ಲಿಕ್‌, ಇಸ್ಟೊನಿಯಾ, ಜರ್ಮನಿ, ಗ್ರೀಸ್‌, ಐಸ್‌ಲ್ಯಾಂಡ್‌, ಲಿಥುನಿಯಾ, ನಾರ್ತ್‌ ಮೆಸಿಡೊನಿಯಾ, ನಾರ್ವೆ, ಸ್ಲೊವೆಕಿಯಾ, ಉಕ್ರೇನ್, ಅಮೆರಿಕಾ ಹಾಗೂ ಭಾರತ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸುತ್ತಿವೆ.

2013ರಲ್ಲಿ ನಡೆದ ಎಸ್‌ಒಎಪಿ ಗೇಮ್ಸ್‌ ಹಾಗೂ 2019ರಲ್ಲಿ ಅಬುದಾಬಿಯಲ್ಲಿ ನಡೆದ ವಿಶ್ವಗೇಮ್ಸ್‌ ಈಜು ಸ್ಪರ್ಧೆಯಲ್ಲಿ ಅರ್ಚನಾ ಕಂಚಿನ ಪದಕ ಪಡೆದಿದ್ದರು. 2015ರಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಹಾಗೂ ಅಂಗವಿಕಲರ ಸಬಲೀಕರಣ ಇಲಾಖೆ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿಗೂ ಭಾಜನರಾಗಿದ್ದಾರೆ ಅರ್ಚನಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು