ನಿಟ್ಟೆ ಡಾ.ಎನ್.ಎಸ್.ಎ.ಎಂ. ಹೈಸ್ಕೂಲ್ ತಂಡಕ್ಕೆ ಸಮಗ್ರ ಪ್ರಶಸ್ತಿ

7
ಅಂತರ್ ಶಾಲಾ-ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆ-

ನಿಟ್ಟೆ ಡಾ.ಎನ್.ಎಸ್.ಎ.ಎಂ. ಹೈಸ್ಕೂಲ್ ತಂಡಕ್ಕೆ ಸಮಗ್ರ ಪ್ರಶಸ್ತಿ

Published:
Updated:
Deccan Herald

ಕಾರ್ಕಳ: ತಾಲ್ಲೂಕಿನ ನಿಟ್ಟೆ ವಿದ್ಯಾಸಂಸ್ಥೆ ಮತ್ತು ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಸಹಭಾಗಿತ್ವದಲ್ಲಿ ಭಾನುವಾರ ಆಯೋಜಿಸಿದ್ದ ಅಂತರ ಶಾಲಾ-ಕಾಲೇಜು ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ನಿಟ್ಟೆಯ ಡಾ. ಎನ್.ಎಸ್.ಎ.ಎಂ ಹೈಸ್ಕೂಲ್ ತಂಡವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ರಾಜ್ಯ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಕೋಶಾಧಿಕಾರಿ ಉದಯ ಕುಮಾರ್ ಮತ್ತು ನಿಟ್ಟೆ ವಿದ್ಯಾಸಂಸ್ಥೆಯ ರಿಜಿಸ್ಟ್ರಾರ್ ಯೋಗಿಶ್ ಹೆಗ್ಡೆ ಸ್ಪರ್ಧೆಯನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲೆಯ ವಿವಿಧ ವಯೋಮಾನ ವಿಭಾಗದ ಸುಮಾರು 792 ಮಂದಿ ಕ್ರೀಡಾಪಟುಗಳು ಓಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಎನ್.ಎಂ.ಎ.ಎಂ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕ್‌ರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಮಣಿಪಾಲ ಕೆ.ಎಂ.ಸಿ.ಯ ಅಸಿಸ್ಟೆಂಟ್ ಡೀನ್ ಡಾ. ಶರತ್ ರಾವ್, ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ರಾಜುವೇಲು, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಅಶೋಕ್ ಅಡ್ಯಾಂತಾಯ, ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ರಘುರಾಮ್ ನಾಯಕ್, ಕಾರ್ಯದರ್ಶಿ ದಿನೇಶ್ ಕೋಟ್ಯಾನ್, ಕಾಲೇಜಿನ ಎಂ.ಸಿ.ಎ ವಿಭಾಗದ ನಿರ್ದೇಶಕ ಡಾ. ಮೋಹನ್ ಹೆಗ್ಡೆ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಹೊಳ್ಳ ಪ್ರಶಸ್ತಿಗಳನ್ನು ವಿತರಿಸಿದರು. ನಿಟ್ಟೆಯ ಕ್ರೀಡಾಧಿಕಾರಿ ಶ್ಯಾಮ್ ಸುಂದರ್, ಸಂಘಟಕ ಗಣೇಶ್ ‍ಪೂಜಾರಿ, ಕ್ರೀಡಾ ನಿರ್ದೇಶಕ ಮುರಳೀಧರ ಶರ್ಮ, ದಿನೇಶ್ ಕುಮಾರ್, ಡಾ.ದೀಪಕ್ ಬಾಯರಿ, ನಾರಾಯಣ್ ಉಪಸ್ಥಿತರಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !