ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ಗೆ ಸಮಗ್ರ ತಂಡ ಚಾಂಪಿಯನ್‌ಶಿಪ್‌

ರಾಜ್ಯಮಟ್ಟದ ಹಿರಿಯರ ಹಾಗೂ 23 ವರ್ಷದೊಳಗಿನವರ ಅಥ್ಲೆಟಿಕ್ಸ್‌
Last Updated 8 ಸೆಪ್ಟೆಂಬರ್ 2021, 4:20 IST
ಅಕ್ಷರ ಗಾತ್ರ

ಉಡುಪಿ: ಮೂಡುಬಿದಿರೆಯ ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್ ಅಜ್ಜರಕಾಡು ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯವಾದ ರಾಜ್ಯಮಟ್ಟದ ಸೀನಿಯರ್ ಹಾಗೂ 23 ವರ್ಷದೊಳಗಿನವರ ಅಥ್ಲೆಟಿಕ್ ಕೂಟದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.

ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ ತಂಡವು ಒಟ್ಟು 175 ಅಂಕಗಳನ್ನು ಗಳಿಸಿತು. ಇದೇ ಕ್ಲಬ್‌ನ ಪುರುಷರ ತಂಡವು 33 ಮತ್ತು ಮಹಿಳೆಯರ ಬಳಗವು 56 ಅಂಕಗಳನ್ನು ಗಳಿಸಿ ತಂಡ ವಿಭಾಗದ ಪ್ರಶಸ್ತಿಗಳನ್ನೂ ಜಯಿಸಿದರು.

23 ವರ್ಷದೊಳಗಿನವರ ವಿಭಾಗದಲ್ಲಿ ಧಾರವಾಡದ ಪುರುಷರ ತಂಡವು 23 ಅಂಕ, ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ ಸ್ಪೋರ್ಟ್ಸ್‌ ಕ್ಲಬ್‌ 63 ಅಂಕಗಳೊಂದಿಗೆ ತಂಡ ವಿಭಾಗದ ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದೆ.

ಪುರುಷರ ವಿಭಾಗದ ಲಾಂಗ್‌ ಜಂಪ್ ಸ್ಪರ್ಧೆಯಲ್ಲಿ ಟ್ರ್ಯಾಕ್‌ ಅಂಡ್ ಫೀಲ್ಡ್‌ನ ರಾಧಾಕೃಷ್ಣ 954 ಪಾಯಿಂಟ್ಸ್‌ ಹಾಗೂ ಮಹಿಳೆಯರ ಕೆನರಾ ಬ್ಯಾಂಕ್‌ನ ಇಂಚರಾ 1,024 ಪಾಯಿಂಟ್ಸ್‌ನೊಂದಿಗೆ ಉತ್ತಮ ಅಥ್ಲಿಟ್ ಪ್ರಶಸ್ತಿ ಗೌರವ ಗಳಿಸಿದರು.

ಫಲಿತಾಂಶ: ಮಹಿಳೆಯರ 800 ಮೀಟರ್ಸ್‌ ಓಟ: ದೀಕ್ಷಾ (ಆಳ್ವಾಸ್‌)–1 ಕಾಲ: 2 ನಿ 23 ಸೆ, ಸಹನಾ(ಹಾಸನ)–2 ಕಾಲ:2 ನಿ 36.4 ಸೆ, ಅರ್ಪಿತಾ (ಆರ್‌.ಟ್ರ್ಯಾಕ್‌ ಫೀಲ್ಡ್‌) ಕಾಲ:2 ನಿ 37.7ಸೆ. 5000 ಮೀಟರ್ಸ್‌: ಕೆ.ಎಂ.ಲಕ್ಷ್ಮಿ(ಆಳ್ವಾಸ್‌)–1ಕಾಲ:17 ನಿ, ಎಲ್‌.ಡಿ.ಪ್ರಿಯಾ(ಆಳ್ವಾಸ್)–2 ಕಾಲ: 20 ನಿ 41.4 ಸೆ, ಬಿ.ಮಾಲಾಶ್ರೀ (ಆಳ್ವಾಸ್‌)–1 ಕಾಲ: 21 ನಿ 32.2 ಸೆ.

ಟ್ರಿಪಲ್‌ ಜಂಪ್‌: ಕೃತಿ ಜಿ.ಶೆಟ್ಟಿ(ಆಳ್ವಾಸ್‌)–1 ಅಂತರ: 10.81 ಮೀ, ಯಾಸ್ಮಿನ್‌ (ಆಳ್ವಾಸ್‌)–2 ಅಂತರ: 10.52 ಮೀ, ಲಾವಣ್ಯ (ಧಾರವಾಡ)–3 ಅಂತರ: 9.53ಮೀ. ಶಾಟ್‌ಪಟ್‌: ಅನುಶ್ರೀ (ಶಿವಮೊಗ್ಗ)–1 ಅಂತರ 10.01, ಪಿ.ರೋಷನಿ (ಚಾಮರಾಜನಗರ) ಅಂತರ: 9.2, ಚೈತ್ರಾ (ದಕ್ಷಿಣ ಕನ್ನಡ)–3 ಅಂತರ: 9.2.

ಹ್ಯಾಮರ್ ಥ್ರೋ: ಅನನ್ಯ ಪೂಜಾರಿ (ಕಾರವಾರ)-1 ಅಂತರ: 36.79 ಮೀ, ನಿವೇದಿತಾ ಸಾವಂತ್ (ಕಾರವಾರ)-2 ಅಂತರ: 34.58 ಮೀ, ಪ್ರಗ್ಯಾ (ದಕ್ಷಿಣ ಕನ್ನಡ)-3 ಅಂತರ: 33.99 ಮೀ. 3000 ಎಸ್‌ಸಿ: ಶ್ವೇತಾ (ಧಾರವಾಡ)–1.

ಪುರುಷರ ವಿಭಾಗ: 800 ಮೀಟರ್ಸ್ ಓಟ: ದೇವಯ್ಯ (ಆಳ್ವಾಸ್‌)–1 ಕಾಲ:1 ನಿ 54.5 ಸೆ, ಬಿ.ಕೆ.ಕುಮಾರಸ್ವಾಮಿ(ಕೆಎಸ್‌ಪಿ)–2 ಕಾಲ: 1 ನಿ 55.4 ಸೆ, ರಕ್ಷಿತ್‌ (ಆಳ್ವಾಸ್‌)–3 ಕಾಲ: 1 ನಿ 58.7 ಸೆ, 5000 ಮೀಟರ್ಸ್‌: ಸುನೀಲ್‌ (ಧಾರವಾಡ)–1 ಕಾಲ: 15 ನಿ 18.5 ಸೆ, ಸಿ.ಎಸ್‌.ಲಕ್ಷ್ಮೀಶ (ಮೈಸೂರು)–2 ಕಾಲ: 15 ನಿ 48.8 ಸೆ, ನಿತಿನ್ ಕುಮಾರ್ (ಕೊಡಗು)–3 ಕಾಲ: 15 ನಿ 52.1ಸೆ.

ಲಾಂಗ್‌ಜಂಪ್‌: ಆರ್‌.ರಾಧಾಕೃಷ್ಣ (ಕ್ಯಾಪ್ಟನ್ಸ್‌ ಟಿ ಅಂಡ್ ಎಫ್‌)–1 ಅಂತರ: 7.15 ಮೀ, ಹಸನ್‌ (ಉಡುಪಿ)–2 ಅಂತರ: 6.82 ಮೀ,ವಿಜಯ್ ಕುಮಾರ್‌ (ಧಾರವಾಡ)–3 ಅಂತರ: 6.73 ಮೀ, ಪೋಲ್‌ ವಾಲ್ಟ್‌: ರಾಥೋಡ್‌ ಲೋಕೇಶ್ ದಾಮು (ಮೈಸೂರು)–1, ಅಂತರ: 3.20 ಮೀ, ಸಿದ್ದರಾಮ ಮಲ್ಲಿ (ಕೆಎಸ್‌ಪಿ)–2, ಅಂತರ: 2.60, ಥ್ರಿಪಲ್ ಜಂಪ್‌: ಕಾರ್ತಿಕ್‌ (ಆಳ್ವಾಸ್‌)–1, ಅಂತರ 14.48 ಮೀ, ಸಂದೇಶ್‌ (ಆಳ್ವಾಸ್‌)–2, ಅಂತರ 13.69 ಮೀ.

ಶಾಟ್‌ಪಟ್‌: ಮೋಹನ್ ಕುಮಾರ್ (ಮೈಸೂರು)–1, ಅಂತರ: 14.69 ಮೀ, ಎಸ್‌.ಕೆ.ಕೆವಿನ್‌ (ಚಾಮರಾಜನಗರ)–2 ಅಂತರ: 11.68 ಮೀ, ಅನಂತ್ ಕುಮಾರ್ (ಬೆಳಗಾವಿ)–3, ಅಂತರ: 11.21 ಮೀ, ಡಿಸ್ಕಸ್‌ ಥ್ರೋ: ಎಸ್‌.ಕೆ.ಕೆವಿನ್‌ (ಚಾಮರಾಜನಗರ)–1, ಅಂತರ: 32.92ಮೀ, ಹ್ಯಾಮರ್ ಥ್ರೋ: ಬಾಲಚಂದ್ರ (ಧಾರವಾಡ)–1 ಅಂತರ 50.39 ಮೀ, ಗವಿಸ್ವಾಮಿ (ಆಳ್ವಾಸ್‌)–2, ಅಂತರ: 43.92 ಮೀ, ಸಚಿನ್‌ ತುಕಾರಾಂ (ಎಸ್‌ಡಿಎಂ ಸ್ಪೋರ್ಟ್ಸ್‌) ಅಂತರ: 39.73 ಮೀ, 110 ಮೀ ಹರ್ಡಲ್ಸ್‌: ಶ್ರೀಕಾಂತ್ ಮಧ್ಯಸ್ಥ (ಆಳ್ವಾಸ್‌)–1, ಕಾಲ: 15 ಸೆ, ಶ್ರವನ್‌ ಎಸ್‌.ಉಲ್ಲಾಳ್‌ (ದಕ್ಷಿಣ ಕನ್ನಡ)–2, ಕಾಲ 15.4 ಸೆ, ಹರೀಶ (ಬೆಂಗಳೂರು)–3, ಕಾಲ: 16.5 ಸೆ, 400 ಮೀ ಹರ್ಡಲ್ಸ್‌: ಭಕ್ಷಿತ್‌ ಸಾಲಿಯಾನ್‌ (ದಕ್ಷಿಣ ಕನ್ನಡ)–1, ಕಾಲ: 55.7, ನವೀನ್‌ (ಡಿವೈಇಎಸ್‌)–2, ಕಾಲ: 56.9 ಸೆ, ಕಾರ್ತಿಕ್‌ (ದಕ್ಷಿಣ ಕನ್ನಡ)–3, ಕಾಲ: 59.5, 3000 ಎಸ್‌ಸಿ: ಡಿ.ನರೇಂದ್ರ (ಕೆಎಸ್‌ಪಿ)–1, ಕಾಲ: 9 ನಿ, 42.7ಸೆ, ಧೀರಜ್‌ ಕರಂಬಯ್ಯ (ಮೈಸೂರು)–2 ಕಾಲ: 9 ನಿ 53.4 ಸೆ, ಗುರುಪ್ರಸಾದ್ (ಕೆಎಸ್‌ಪಿ) ಕಾಲ:
10 ನಿ 05.8 ಸೆ.

23 ವರ್ಷದೊಳಗಿನವ ಮಹಿಳೆಯರ ಫಲಿತಾಂಶ: 200 ಮೀಟರ್ಸ್‌ ಜ್ಯೋತಿಕಾ (ಎಎಸ್‌ಎಫ್‌)–1, ಕಾಲ: 24.9 ಸೆ, ಆರ್‌.ಹರ್ಷಿಣಿ (ಮೈಸೂರು)–2, ಕಾಲ 26ಸೆ, ಮೋನಿಕಾ ರುಕ್ಮಯ್ಯ ಗೌಡ(ಬೆಂಗಳೂರು)–3, ಕಾಲ: 26.2 ಸೆ, 400 ಮೀಟರ್ಸ್‌: ಜ್ಯೋತಿಕಾ (ಉಡುಪಿ)–1, ಕಾಲ: 57.8, ಜ್ಯೋತಿ ಕಟ್ಟಿಮನಿ(ಧಾರವಾಡ)–2 59 ಸೆ, ಅಕ್ಷತಾ (ಕಾರವಾರ)–3, ಕಾಲ: 60ಸೆ

800 ಮೀಟರ್ಸ್ ಓಟ: ಇ.ಬಿ.ಅರ್ಪಿತಾ (ಫ್ಯೂಷನ್‌ ಅಥ್ಲೆಟಿಕ್‌ ಕ್ಲಬ್‌)–1 ಕಾಲ: 2 ನಿ 13.5 ಸೆ, ದೀಪಾಶ್ರೀ (ಆಳ್ವಾಸ್‌) –2, ಕಾಲ: 2 ನಿ 22.6ಸೆ, ರೇಖಾ (ದಕ್ಷಿಣ ಕನ್ನಡ)–3, ಕಾಲ: 2 ನಿ 23.1ಸೆ, 5000 ಮೀಟರ್ಸ್‌: ಚೈತ್ರಾ ದೇವಾಡಿಗ (ಆಳ್ವಾಸ್‌)–1, ಕಾಲ: 18 ನಿ 51.7 ಸೆ, ಸ್ಪಂದನ (ಆಳ್ವಾಸ್‌)–, ಕಾಲ: 20 ನಿ 25.9ಸೆ, ಶುಭಾಂಗಿ
ಕಾಕತ್ಕರ್ (ಬೆಳಗಾವಿ)–3 ಕಾಲ: 20 ನಿ 32.4 ಸೆ, ಪೋಲ್ ವಾಲ್ಟ್‌: ಸಿಂಧುಶ್ರೀ ಜಿ.ಸಾಯಿ ಅಂತರ: 3.40 ಮೀ, ಪ್ರೀತಿ (ಆಳ್ವಾಸ್‌)–2 ಅಂತರ: 2.65ಮೀ, ಭವಿತಾ ಶೆಟ್ಟಿ (ಆಳ್ವಾಸ್‌)–3 ಅಂತರ: 2.55 ಮೀ, ಥ್ರಿಪಲ್ ಜಂಪ್‌:ವಿ.ಎಸ್‌.ಶ್ರೀದೇವಿಕಾ (ದ.ಕ)–1, ಅಂತರ: 11.95 ಮೀ, ವಿ.ಎಸ್‌. ಅನಿತಾ, (ಆಳ್ವಾಸ್‌)–2 ಅಂತರ: 11.39 ಮೀ, ಐಶ್ವರ್ಯಾ ಹಿರೋಜಿ ನೇಸರ್ಕರ್‌ (ಬೆಳಗಾವಿ)–3, ಅಂತರ: 11.15 ಮೀ,

ಶಾಟ್‌ಪಟ್‌: ಅಂಬಿಕಾ (ಮೈಸೂರು)–1, ಅಂತರ: 14.33 ಮೀ, ವಿದ್ಯಾಶ್ರೀ ಪಡತಾರ್‌(ಬೆಳಗಾವಿ)–2, ಅಂತರ: 9.57 ಮೀ, ಸುಷ್ಮಾ (ಆಳ್ವಾಸ್‌)–3 ಅಂತರ: 9.50 ಮೀ, ಹ್ಯಾಮರ್ ಥ್ರೋ: ಅಮ್ರಿನ್‌ (ಆಳ್ವಾಸ್‌)–1 ಅಂತರ: 46.72ಮೀ, ನಿಶೆಲ್‌ ಡೆಲ್ಫಿನಾ ಡಿಸೊಜಾ (ದ.ಕ)–2 ಅಂತರ: 39.33 ಮೀ, ವೀಕ್ಷಾ(ಆಳ್ವಾಸ್‌)–3, ಅಂತರ: 38.83 ಮೀ, 400 ಮೀ ಹರ್ಡಲ್ಸ್‌: ಸಿಂಚಲ್‌ ಟಿ.ಆರ್.ಕಾವೇರಮ್ಮ (ಫ್ಯೂಷನ್ ಅಥ್ಲೆಟಿಕ್ ಕ್ಲಬ್)–1, ಕಾಲ: 1ನಿ 00.5 ಸೆ, ಕೆ.ಪ್ರಜ್ಞಾ (ಡಿವೈಇಎಸ್‌ ಉಡುಪಿ)–2, ಕಾಲ: 1 ನಿ 04.4ಸೆ, ಮೇಘಾ (ಧಾರವಾಡ)–3, ಕಾಲ: 1 ನಿ, 04.6 ಸೆ, 3000 ಎಸ್‌ಸಿ: ಎಸ್‌.ಡಿ.ಶಾಹಿನ್(ಧಾರವಾಡ)–1 12 ನಿ 02 ಸೆ, ಡಿ.ಆರ್‌.ಸ್ಮಿತಾ ಸಾಯಿ–2, ಕಾಲ: 12 ನಿ 37.7 ಸೆ, ಭೂಮಿಕಾ (ಉಡುಪಿ)–3, ಕಾಲ: 16 ನಿ 04.7 ಸೆ,

ಪುರುಷರ 200 ಮೀ ಓಟ: ಕೃಷಿಕ್‌ (ತುಮಕೂರು)–1 ಕಾಲ: 22.1 ಸೆ, ವಿನಾಯಕ್‌ (ಧಾರವಾಡ)–2, ಕಾಲ: 22.2ಸೆ, ರಿನ್ಸ್‌ ಜೋಸೆಫ್‌(ಆಳ್ವಾಸ್‌)–3, ಕಾಲ: 22.3 ಸೆ, 800 ಮೀಟರ್ಸ್‌: ನಾಗರಾಜ್‌ (ಧಾರವಾಡ)–1, ಕಾಲ: 1ನಿ 57.4ಸೆ, ಎಂ.ಸಿ.ಮಿಲನ್‌(ದ.ಕ)–2, ಕಾಲ: 1 ನಿ 59.1ಸೆ, ಯಶ್ವಂತ್‌ (ಬೆಂಗಳೂರು)–3, ಕಾಲ: 2ನಿ 00.2ಸೆ, ‌

5000 ಮೀಟರ್ಸ್‌: ರೋಹಿತ್‌( ಕ್ಯಾಪ್ಟನ್ಸ್ ಟ್ರಾಕ್‌ ಅಂಡ್ ಫೀಲ್ಡ್‌ ಬೆಂಗಳೂರು)–1, ಕಾಲ: 15 ನಿ 30.1ಸೆ, ಆರ್‌.ಸಿ.ರಾಘವೇಂದ್ರ (ಬೆಂಗಳೂರು)–2 ಕಾಲ: 15 ನಿ 35.2, ನರಸಿಂಗ್ ಪಟೇಲ್‌(ಬೆಂಗಳೂರು ನಗರ)–3, ಕಾಲ: 15 ನಿ 53.9ಸೆ, ಉದ್ದ ಜಿಗಿತ: ಪುರಷೋತ್ತಮ್(ಹಾಸನ)–1, ಅಂತರ: 6.93ಮೀ, ಆರ್ಯ (ನ್ಯಾಷನಲ್ ಅಕಾಡೆಮಿ)–2, ಅಂತರ: 6.92 ಮೀ, ಅಂಥೋನಿ ಡೆನ್ಸಿಲ್‌ (ಶಿವಮೊಗ್ಗ)–3, ಅಂತರ: 6.88 ಮೀ,

ಪೋಲ್ ವಾಲ್ಟ್‌: ಗೋಪಾಲಕೃಷ್ಣ (ಆಳ್ವಾಸ್‌)–1 ಅಂತರ: 3.10 ಮೀ, ಜಿ.ಯೋಗೇಶ್‌ (ಆಳ್ವಾಸ್‌)–2 ಅಂತರ: 2.70 ಮೀ, ಥ್ರಿಪಲ್ ಜಂಪ್‌: ಮಹಂತ್‌ (ಮಂಡ್ಯ)–2 ಅಂತರ: 14.82 ಮೀ, ಪ್ರಭಾಕರನ್‌ (ಶಿವಮೊಗ್ಗ)–2, ಅಂತರ: 14.42ಮೀ, ಪ್ರೀತಮ್‌ ರೈ (ದ.ಕ)–3 ಅಂತರ: 13.92 ಮೀ. ಶಾಟ್‌ಪಟ್‌:ಬಿ.ಮಾನುಷ್‌ (ಮೈಸೂರು)–1 ಅಂತರ: 16.12 ಮೀ, ಯಶಸ್ ಅಯ್ಯಪ್ಪ (ನ್ಯಾಷನಲ್ ಅಕಾಡೆಮಿ)–2, ಅಂತರ: 15.51ಮೀ, ರಾಹುಲ್ ಕಶ್ಯಪ್‌ (ಮೈಸೂರು)–3, ಅಂತರ: 14.88ಮೀ, ಹ್ಯಾಮರ್ ಥ್ರೋ: ಆಂಜನೇಯ (ಕಾರವಾರ)–1 ಅಂತರ: 48.85 ಮೀ, ಸಚಿನ್ (ಕೊಪ್ಪಳ)–2 ಅಂತರ: 45.35 ಮೀ, ರಾಹುಲ್‌ ರಾಮ್‌ (ಆಳ್ವಾಸ್‌)–3, ಅಂತರ: 40.60 ಮೀ, 400 ಮೀ ಹರ್ಡಲ್ಸ್:ರಕ್ಷಿತ್‌ ( ಉಡುಪಿ)–1 ಕಾಲ: 54.4ಸೆ, ಆರ್ಯನ್‌ ಪ್ರಜ್ವಲ್‌ ಕಶ್ಯಪ್‌ (ಮೈಸೂರು)–2 , ಕಾಲ: 56 ಸೆ, ಸೂರಜ್‌ (ಬೆಳಗಾವಿ)–3, ಕಾಲ: 56.8 ಸೆ, 3000 ಎಸ್‌ಸಿ:
ಮುಹ್ಯುದ್ದಿನ್ ಅಜ್ಮಲ್ (ರೋರರ್ಸ್‌ ಟ್ರಾಕ್ ಅಂಡ್ ಫೀಲ್ಡ್ ಅಕಾಡೆಮಿ)–1 ಕಾಲ: 10 ನಿ 14.4ಸೆ, ಪ್ರಣೀತ್ (ರೋರರ್ಸ್‌ ಟ್ರಾಕ್ ಅಂಡ್ ಫೀಲ್ಡ್ ಅಕಾಡೆಮಿ)–2 ಕಾಲ: 10 ನಿ 22.4ಸೆ, ಅಶುತೋಷ್‌ ಪ್ರಣೀಶ್‌ (ಮೈಸೂರು)–3 ಕಾಲ: 10 ನಿ 34ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT