ಗುರುವಾರ , ನವೆಂಬರ್ 21, 2019
22 °C
udp squash

ಸ್ಕ್ವಾಷ್‌: ಮದ್ರಾಸ್‌, ಮಾಹೆ ವಿವಿ ಫೈನಲ್‌ಗೆ

Published:
Updated:
Prajavani

ಉಡುಪಿ: ಮಣಿಪಾಲದ ಮಾಹೆಯ ಮರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಸ್ಕ್ವಾಷ್ ಟೂರ್ನಿಯಲ್ಲಿ ಮದ್ರಾಸ್ ಹಾಗೂ ಮಾಹೆ ವಿವಿ ಫೈನಲ್‌ ತಲುಪಿವೆ.

2ನೇ ದಿನವಾದ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮದ್ರಾಸ್‌ ವಿವಿಯು 3–0 ಗೇಮ್‌ಗಳಿಂದ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿಯನ್ನು ಮಣಿಸಿತು.

ಮತ್ತೊಂದು ಪಂದ್ಯದಲ್ಲಿ ಮಾಹೆ ವಿವಿ 3–1 ಗೇಮ್‌ಗಳಿಂದ ರಾಯ್‌ಪುರದ ಪಂಡಿತ್‌ ರವಿಶಂಕರ್ ಶುಕ್ಲಾ ವಿವಿಯನ್ನು ಪರಾಭವಗೊಳಿಸಿ ಫೈನಲ್‌ ತಲುಪಿತು. ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಮಾಹೆ ವಿವಿಯು 3–1 ಗೇಮ್‌ಗಳಿಂದ ಉದಯಪುರ್‌ನ ಮೋಹನ್‌ಲಾಲ್ ಸುಖಾಡಿಯಾ ವಿವಿಯ ವಿರುದ್ಧ ಜಯಗಳಿಸಿತು.

ಶುಕ್ರವಾರ ಬೆಳಿಗ್ಗೆ 8ಕ್ಕೆ ಫೈನಲ್‌ ಪಂದ್ಯ ನಡೆಯಲಿದ್ದು, ಮದ್ರಾಸ್‌ ವಿವಿ ಹಾಗೂ ಮಾಹೆ ವಿವಿ ಮುಖಾಮುಖಿಯಾಗಲಿವೆ.

ಪ್ರತಿಕ್ರಿಯಿಸಿ (+)