ಗುರುವಾರ , ಜುಲೈ 7, 2022
23 °C

ನಿರಂತರ ಹೋರಾಟಕ್ಕೆ ಸಿಕ್ಕ ಮಾಸಾಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಕ್ಕಳಿಂದ ಹಾಗೂ ಕುಟುಂಬದಿಂದ ಪರಿತ್ಯಕ್ತಗೊಂಡು ಜೀವನ ನಿರ್ವಹಣೆ ಸಾಧ್ಯವಾಗದೆ ಪರಿತಪಿಸುತ್ತಿದ್ದ ಸಾಸ್ತಾನ ಮೂಲದ 72 ವರ್ಷದ ಶ್ರೀನಿವಾಸ ತುಂಗರಿಗೆ ಪ್ರತಿತಿಂಗಳು ₹ 9,000 ಮಾಸಾಶನ ನೀಡುವಂತೆ ಕುಂದಾಪುರದ ಹಿರಿಯ ನಾಗರಿಕರ ನ್ಯಾಯ ಮಂಡಳಿ ಆದೇಶಿಸಿದೆ.

ಜೀವನ ನಿರ್ವಹಣೆಗೆ ಕುಟುಂಬದ ಸದಸ್ಯರಿಂದ ಮಾಸಾಶನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಕುಂದಾಪುರದ ಹಿರಿಯ ನಾಗರಿಕರ ನ್ಯಾಯ ಮಂಡಳಿ, ಶ್ರೀನಿವಾಸ ತುಂಗರಿಗೆ ಅವರ ಮಕ್ಕಳು ತಲಾ ₹ 3 ಸಾವಿರದಂತೆ ಪ್ರತಿ ತಿಂಗಳು ₹ 9 ಸಾವಿರ ಮಾಸಾಶನ ನೀಡುವಂತೆ ಆದೇಶ ನೀಡಿದೆ.

ಆದೇಶವನ್ನು ಅನುಷ್ಠಾನಕ್ಕೆ ತರುವಂತೆ ಜಿಲ್ಲಾ ಹಿರಿಯ ನಾಗರಿಕರ ಕಲ್ಯಾಣ ಮಂಡಳಿಗೆ ನಿರ್ದೇಶನವನ್ನೂ ನೀಡಿದೆ. ‌

ಇಳಿ ವಯಸ್ಸಿನಲ್ಲಿ ಶ್ರೀನಿವಾಸ ತುಂಗರು ಜೀವನ ನಿರ್ವಹಣೆಗೆ ಪಡುತ್ತಿದ್ದ ಕಷ್ಟಗಳನ್ನು ಕಂಡು ಮಾನವ ಹಕ್ಕಗಳ ರಕ್ಷಣಾ ಪ್ರತಿಷ್ಠಾನ ಕಾನೂನು ಹೋರಾಟಕ್ಕೆ ಮುಂದಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು