ಕಾರ್ಕಳ: ವಿದ್ಯಾರ್ಥಿಗಳು ಬರವಣಿಗೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಭುವನೇಂದ್ರ ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ಟಿ.ಎ.ಜಗದೀಶ ಹೇಳಿದರು.

ಇಲ್ಲಿನ ಶ್ರೀಭುವನೇಂದ್ರ ಕಾಲೇಜಿನ 62ನೇ ವಾರ್ಷಿಕಾಂಕ ಚಂದನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಶಿಕ್ಷಣದ ಮೌಲ್ಯ ಹಾಗೂ ದೃಷ್ಟಿಕೋನದಲ್ಲಿ ಆಗಬೇಕಿರುವ ಬದಲಾವಣೆಗಳು’ ಎಂಬ ವಿಷಯದ ಬಗ್ಗೆ ತೃತೀಯ ಬಿ.ಎ. ವಿದ್ಯಾರ್ಥಿ ಅಜಿತ್ ಲಾಲ್ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ‘ಕಾಲೇಜಿನ ವಾರ್ಷಿಕಾಂಕವೆಂದರೆ ಅದು ಕೇವಲ ಸಂಚಿಕೆ ಮಾತ್ರವಲ್ಲ, ನೆನಪುಗಳ ಖಜಾನೆ. ಕಾಲೇಜಿನ ಎಲ್ಲ ಕಾರ್ಯಕ್ರಮಗಳೂ, ವಿದ್ಯಾರ್ಥಿ ಬರಹಗಳು, ಪ್ರತಿಭೆ ಇಲ್ಲಿ ಅಡಕವಾಗಿರುತ್ತದೆ’ ಎಂದರು.

ಪ್ರಧಾನ ಸಂಪಾದಕಿ, ಕನ್ನಡ ವಿಭಾಗದ ಮುಖ್ಯಸ್ಥೆ ವನಿತಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ, ಐಕ್ಯುಎಸಿ ನಿರ್ದೇಶಕ ಪ್ರೊ. ಎಚ್.ಜಿ.ನಾಗಭೂಷಣ್ ಇದ್ದರು. ಸಾಹಿತ್ಯ ಸಂಘದ ಕಾರ್ಯದರ್ಶಿ ಶ್ವೇತಾ ನಿರೂಪಿಸಿದರು. ಪ್ರಾರ್ಥನಾ ಸ್ವಾಗತಿಸಿದರು. ಪ್ರೀತಮ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.