ಸುಬ್ರಹ್ಮಣ್ಯ ಮಠದ ವರ್ಚಸ್ಸಿಗೆ ಧಕ್ಕೆಯಾದರೆ ಹೋರಾಟ

7
ವಿದ್ವಾಂಸ ಡಾ.ಆನಂದ ತೀರ್ಥ ಉಪಾಧ್ಯಾಯ ಎಚ್ಚರಿಕೆ

ಸುಬ್ರಹ್ಮಣ್ಯ ಮಠದ ವರ್ಚಸ್ಸಿಗೆ ಧಕ್ಕೆಯಾದರೆ ಹೋರಾಟ

Published:
Updated:
Deccan Herald

ಉಡುಪಿ: 700 ವರ್ಷದ ಇತಿಹಾಸವಿರುವ ಸುಬ್ರಹ್ಮಣ್ಯ ಮಠದ ವರ್ಚಸ್ಸಿಗೆ ಧಕ್ಕೆ ಉಂಟುಮಾಡಿದರೆ ತುಳು ಶಿವಳ್ಳಿ ಬ್ರಾಹ್ಮಣ ಮಾಧ್ವ ಮಹಾಮಂಡಲದಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ವಾಂಸ ಡಾ.ಆನಂದ ತೀರ್ಥ ಉಪಾಧ್ಯಾಯ ಎಚ್ಚರಿಸಿದರು. 

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಚೀನ ಪರಂಪರೆಯುಳ್ಳ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ ಮಠಕ್ಕೆ ಮಸಿ ಬಳಿಯುವ ಕೆಲಸವನ್ನು ಮಾಡಲಾಗುತ್ತಿದೆ. ಮಾಧ್ಯಮಗಳನ್ನು ಬಳಸಿಕೊಂಡು ಆರೋಪಗಳನ್ನು ಮಾಡಲಾಗುತ್ತಿದೆ. ಇದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮಠದಲ್ಲಿ ನಡೆಯುವ ಧಾರ್ಮಿಕ ವಿಧಿವಿಧಾನಗಳು ಅಕ್ರಮ ಎಂದು ಆರೋಪಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರ. ಭಕ್ತರ ಅಪೇಕ್ಷೆಯಂತೆಯೇ ಆಶ್ಲೇಷ ಬಲಿ ಸೇರಿದಂತೆ ಹಲವು ಸೇವೆಗಳನ್ನು ನಡೆಸಲಾಗುತ್ತಿದೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆಧಾರರಹಿರ ಆರೋಪಗಳನ್ನು ಮಾಡುತ್ತಿದ್ದಾರೆ. ದೇವಸ್ಥಾನದ ಸೇವೆಗಳನ್ನು ಮಠದಲ್ಲಿ ಮಾಡಲಾಗುತ್ತಿಲ್ಲ. ಶಾಸ್ತ್ರೀಯವಾಗಿ ಕೆಲವು ಕ್ಷೇತ್ರವಿಧಿಗಳನ್ನು ಮಾತ್ರ ಮಠದಲ್ಲಿಯೇ ನಡೆಸಲಾಗುತ್ತಿದೆ ಎಂದರು.

1886ರವರೆಗೂ ದೇವಸ್ಥಾನವು ಮಠದ ಆಡಳಿತದಲ್ಲಿತ್ತು ಎಂಬುದಕ್ಕೆ ದಾಖಲೆಗಳು ಇವೆ. 1950ರಲ್ಲಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿತ್ತು. ಇಂದಿಗೂ ದೇವಸ್ಥಾನದಲ್ಲಿ ಮಧ್ವ ಸಂಪ್ರದಾಯದಂತೆ ತಂತ್ರಸಾರ ಆಗಮ ಪ್ರಕಾರವೇ ಪೂಜೆ ನಡೆಯುತ್ತಿದೆ. ಅರ್ಚಕರಿಗೆ ಮಂತ್ರೋಪದೇಶ ಹಾಗೂ ಮುದ್ರಾಧಾರಣೆ ಮಠದ ಸ್ವಾಮೀಜಿಯವರಿಂದಲೇ ಪಡೆಯುವ ಕ್ರಮವಿದೆ ಎಂದರು.

ಮುಖ್ಯವಾಗಿ 1905ರಲ್ಲಿ ಪಿ.ಆರ್.ಗಣಪತಿ ಅಯ್ಯರ್ ಎಂಬವರು ತಮ್ಮ ಪುಸ್ತಕದಲ್ಲಿ ಮಧ್ವಚಾರ್ಯರು ಸುಬ್ರಹ್ಮಣ್ಯನನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಉಲ್ಲೇಖಿಸಿದ್ದು, ನ್ಯಾಯಾಲಯ ಕೂಡ ಈ ವಾದವನ್ನು ಮಾನ್ಯ ಮಾಡಿದೆ ಎಂದು ತಿಳಿಸಿದರು.

ತುಳು ಶಿವಳ್ಳಿ ಮಧ್ವ ಮಹಾಮಂಡಲದ ಅಧ್ಯಕ್ಷ ರವೀಂದ್ರ ಆಚಾರ್ಯ, ಸದಸ್ಯ ದಾಮೋದರ ಐತಾಳ್, ಕೋಶಾಧಿಕಾರಿ ವಾದಿರಾಜ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್ ಭಟ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !