ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ| ಇಷ್ಟಪಟ್ಟು ಓದಿದರೆ ಯಶಸ್ಸು: ಭಂಡಾರಿ

ಪರೀಕ್ಷಾ ಪೂರ್ವ ತಯಾರಿ ಬಗ್ಗೆ ನಾಲ್ಕೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಉಪನ್ಯಾಸ
Last Updated 5 ಫೆಬ್ರುವರಿ 2023, 6:18 IST
ಅಕ್ಷರ ಗಾತ್ರ

ಬ್ರಹ್ಮಾವರ: ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ, ಆತಂಕ, ತಳಮಳ ಸಹಜ. ಆದರೆ ಪರೀಕ್ಷೆಗೆ ಭಯಪಡಬೇಕಾಗಿಲ್ಲ. ನಾವು ಹೆದರಿದರೆ ಪರೀಕ್ಷೆ ನಮ್ಮನ್ನು ಹೆದರಿಸುತ್ತದೆ. ಆದ್ದರಿಂದ ಧೈರ್ಯದಿಂದ ಎದುರಿಸಬೇಕು ಎಂದು ಮನೋವಿಜ್ಞಾನಿ ಡಾ.ಪಿ.ವಿ.ಭಂಡಾರಿ ಹೇಳಿದರು.

ನಾಲ್ಕೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಪರೀಕ್ಷಾ ಪೂರ್ವ ತಯಾರಿ ಕಾರ್ಯಕ್ರಮದಲ್ಲಿ ಪರೀಕ್ಷೆ ಎದುರಿಸುವುದು ಹೇಗೆ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಅಂಕಗಳೇ ಜೀವನವನ್ನು ನಿರ್ಧರಿಸುವುದಿಲ್ಲ. ಶಾಂತ ಮನಸ್ಸಿನಿಂದ, ಇಷ್ಟಪಟ್ಟು ಓದಿದ್ದು ನೆನಪಿನಲ್ಲಿ ಉಳಿಯಲು ಸಾಧ್ಯ. ಯೋಗ, ವ್ಯಾಯಾಮ, ಪ್ರಾರ್ಥನೆ ಮುಂತಾದವುಗಳಿಂದ ಮನಸ್ಸನ್ನು ಹತೋಟಿಯಲ್ಲಿಡಲು ಸಾಧ್ಯ ಎಂದ ಅವರು ಕನಸು, ಶಿಸ್ತು, ಛಲ, ಶ್ರದ್ಧೆ, ಪ್ರಯತ್ನ ಮುಖ್ಯ. ಹೋಲಿಕೆ ಮತ್ತು ಸ್ಪರ್ಧೆ ಬೇಡ. ಪಾಲಕರು ಮಕ್ಕಳ ಓದಿಗೆ ಪ್ರೋತ್ಸಾಹ ನೀಡಬೇಕೇ ಹೊರತು ಬೇರೆಯವರೊಂದಿಗೆ ಹೋಲಿ ಸಬಾರದು ಎಂದು ಸಲಹೆ ನೀಡಿದರು.

ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ ಕೆ. ಅಧ್ಯಕ್ಷತೆ ವಹಿಸಿದ್ದರು. ಡಾ.ಪಿ.ವಿ. ಭಂಡಾರಿ ಅವರನ್ನು ಗೌರವಿಸಲಾಯಿತು. ಸಿ.ಆರ್.ಪಿ ದೀಪಾ, ಗ್ರಾಮ ಪಂಚಾಯಿತಿ ಸದಸ್ಯೆ ಜಯಲಕ್ಷಿ ಇದ್ದರು.

ಶಿಕ್ಷಕ ಟಿ.ಕೃಷ್ಣ ಶೆಟ್ಟಿ ಸ್ವಾಗತಿಸಿದರು. ಅನಿತಾ ರೀಟಾ ರೊಸಾರಿಯೊ ನಿರೂಪಿಸಿದರು. ಕೃಷ್ಣ ನಾಯ್ಕ, ಸುಧಾಕರ ನಾಯ್ಕ, ತ್ರಿವೇಣಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT