ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತ ಮನವಿಗೆ ಸುಧಾಮೂರ್ತಿ ಸ್ಪಂದನೆ: ₹ 54 ಲಕ್ಷದ ವೈದ್ಯಕೀಯ ಸಲಕರಣೆ ನೆರವು

ಉಡುಪಿ
Last Updated 1 ಏಪ್ರಿಲ್ 2020, 16:21 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ವೈದ್ಯಕೀಯ ಸಲಕರಣೆಗಳ ನೆರವು ನೀಡುವಂತೆ ಜಿಲ್ಲಾಡಳಿತ ಮಾಡಿದ್ದ ಮನವಿಗೆ ಸ್ಪಂದಿಸಿರುವ ಇನ್‌ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಅವರು ಬುಧವಾರ ₹ 54 ಲಕ್ಷ ಮೌಲ್ಯದ ವಸ್ತುಗಳನ್ನು ಜಿಲ್ಲೆಗೆ ಕಳುಹಿಸಿದ್ದಾರೆ.

4,000 ಎನ್‌–95 ಮಾಸ್ಕ್‌, 4,000 ಸ್ಯಾನಿಟೈಸರ್ಸ್‌, 25,000 ಟ್ರಿಪಲ್ ಲೇಯರ್ ಮಾಸ್ಕ್‌, 10,000 ಸರ್ಜಿಕಲ್ ಗ್ಲೌಸ್‌, 1,500 ಪಿಪಿಇ ಸೂಟ್ಸ್‌ಗಳನ್ನು ಸುಧಾಮೂರ್ತಿ ನೀಡಿದ್ದಾರೆ.

ಜಿಲ್ಲಾಡಳಿತ ಮನವಿ ಮಾಡಿದ್ದ 24 ಗಂಟೆಯಲ್ಲಿ ನೆರವು ಸಿಕ್ಕಿದೆ. ಇದಕ್ಕಾಗಿ ಸುಧಾಮೂರ್ತಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT