ಕೋಟ(ಬ್ರಹ್ಮಾವರ): ಕೋಟ ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಮಣೂರಿನ ಗೀತಾನಂದ ಫೌಂಡೇಷನ್, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್, ನೆನಪು ಮೂವಿಸ್ ಮತ್ತು ಉಸಿರು ಕೋಟದ ಸಾರಥ್ಯದಲ್ಲಿ ಜ. 26ರಂದು ಕೋಟದ ಕಾರಂತ ಥೀಂ ಪಾರ್ಕ್ನಲ್ಲಿ ನಡೆಯುವ ‘ಸಮಗ್ರ ಶಿಕ್ಷಕರ ಸಾಹಿತ್ಯ ಸಮ್ಮೇಳನ’ಕ್ಕೆ ಅಧ್ಯಕ್ಷರಾಗಿ ಕುಕ್ಕುಜೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಸುರೇಶ ಮರಕಾಲ ಅವರನ್ನು ಆಯ್ಕೆ ಮಾಡಲಾಗಿದೆ.

ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ಇವರು, 5 ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟಕ್ಕೆ, ಇಬ್ಬರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಅವರ ಪ್ರತಿಭೆಗೆ ಅವಕಾಶ ನೀಡಿದವರು. ಜೀವನ ಶಿಕ್ಷಣದ ವಿಶೇಷ ಶೈಕ್ಷಣಿಕ ಪ್ರಕಾರದ ಹರಿಕಾರರು ಕಲಿಕೆಯನ್ನು ಲವಲವಿಕೆಯಿಂದ ಮೂಡಿಸುವ ಉದ್ದೇಶದಿಂದ ಔಪಚಾರಿಕ ಕಲಿಕೆಯ ಜತೆಗೆ ಶಾಡೋ ಪ್ಲೇ, ನಾಟಕ, ಪೇಪರ್ ಕ್ರಾಫ್ಟ್, ತೋಟಗಾರಿಕೆ, ಚಿತ್ರಕಲೆ, ಕೊಳಲು ಕಲಿಕೆ, ವಿವೇಕ ರಾತ್ರಿ ತರಗತಿಗಳು ಮೊದಲಾದ ಕಲಿಕೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದ್ದಾರೆ ಎಂದು ಕಾರಂತ ಥೀಂ ಪಾರ್ಕ್ನ ಕಾರ್ಯಾಧ್ಯಕ್ಷ ಆನಂದ ಸಿಕುಂದರ್, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಬಾರಿಕೆರೆ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ರೋಟರಿ ಕ್ಲಬ್ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ಕಾರ್ಯದರ್ಶಿ ಮುರಳಿಧರ ನಾಯರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.