ಬ್ರಹ್ಮಾವರ: ಚೇರ್ಕಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನೆಹರು ಯುವ ಕೇಂದ್ರದ ಪ್ರಾಯೋಜಕತ್ವದಲ್ಲಿ, ಪೇತ್ರಿ ಚೇರ್ಕಾಡಿಯ ಪ್ರಗತಿ ಸಂಜೀವಿನಿ ಒಕ್ಕೂಟ ಹಾಗೂ ಸಮೃದ್ಧಿ ಮಹಿಳಾ ಮಂಡಳಿಯ ಸಹಯೋಗದೊಂದಿಗೆ ‘ಚೇರ್ಕಾಡಿ ನನ್ನ ಭಾರತ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ’ ನಡೆಯಿತು.
ಈ ಸಂದರ್ಭ ಸ್ವಚ್ಛತಾ ಹೀ ಸೇವಾ ಪ್ರಮಾಣವಚನ ಸ್ವೀಕರಿಸಲಾಯಿತು. ಪಂಚಾಯಿತಿ ಸುತ್ತಮುತ್ತ, ಸಭಾಂಗಣ, ಆಸ್ಪತ್ರೆ ಆವರಣ, ಶಾಲಾ ಆವರಣ ಸ್ವಚ್ಛ ಮಾಡಿ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸವನ್ನು ಕಸ ವಿಲೇವಾರಿ ಗಾಡಿಗೆ ಹಾಕಿ ಕಳುಹಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ದಿವ್ಯಾ, ಚೇರ್ಕಾಡಿ ಸಮೃದ್ಧಿ ಮಹಿಳಾ ಮಂಡಲದ ಅಧ್ಯಕ್ಷೆ ಲತಾ ಡಿ ಶೆಟ್ಟಿ, ಕಾರ್ಯದರ್ಶಿ ಶಾರದಾ ಎಂ ಶೆಟ್ಟಿ ಇದ್ದರು.