ಇಂದು ವಟುವಿಗೆ ಪ್ರಣವೋಪದೇಶ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ಸನ್ಯಾಸ ಧೀಕ್ಷೆಯ ಪೂರ್ವಭಾವಿಯಾಗಿ ಆತ್ಮಶ್ರಾದ್ಧ, ಗೋದಾನ, ದಶದಾನ

ಇಂದು ವಟುವಿಗೆ ಪ್ರಣವೋಪದೇಶ

Published:
Updated:
Prajavani

ಉಡುಪಿ: ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಶೈಲೇಶ ಉಪಾಧ್ಯಾಯ ಎಂಬ ವಟುವಿಗೆ ಸನ್ಯಾಸ ಧೀಕ್ಷೆಯ ಪೂರ್ವಭಾವಿ ವಿಧಿವಿಧಾನಗಳು ಗುರುವಾರ ನೆರವೇರಿದವು.

ಮೊದಲಿಗೆ ಆತ್ಮಶ್ರಾದ್ಧ ನೆರವೇರಿತು. ಬಳಿಕ ತುರಿಯಾಶ್ರಮವಾದ ಸನ್ಯಾಸ ಅಧಿಕಾರ ಯೋಗ್ಯತಾ ಸಿದ್ಧಿಗೋಸ್ಕರ ಪ್ರಾಯಶ್ಚಿತ್ತ ಪೂರ್ವಕವಾಗಿ ಗೋದಾನ ಹಾಗೂ ದಶದಾನಗಳನ್ನು ನೀಡಲಾಯಿತು. ಬಳಿಕ ವಟು ಶೈಲೇಶ ಉಪಾಧ್ಯಾಯ ಅವರ ಕೇಶಮುಂಡನ ನಡೆಯಿತು. ನಂತರ ಮಧ್ವಸರೋವರದಲ್ಲಿ ಪವಿತ್ರಸ್ನಾನ ನೆರವೇರಿತು.

ಶುಕ್ರವಾರ ಬೆಳಗಿನ ಜಾವ ಬ್ರಾಹ್ಮೀ ಮಹೂರ್ತವಾದ 3.57ಕ್ಕೆ ಪ್ರಣವೋಪದೇಶ ಪುರಸ್ಸರ ಸನ್ಯಾಸಧೀಕ್ಷೆ ನೆರವೇರಲಿದೆ. ಪಲಿಮಾರು ಶ್ರೀಗಳು ವಟುವಿಗೆ ಪ್ರಣವೋಪದೇಶ ನೀಡಲಿದ್ದಾರೆ. ಶನಿವಾರ ಅಷ್ಟ ಮಹಾಮಂತ್ರೋಪದೇಶ ಸರ್ವಮೂಲ ಶಾಂತಿಪಾಠ, ತತ್ವ ಚಿಂತನೆಗಳ ವಿಧಿವಿಧಾನಗಳು ನಡೆಯಲಿವೆ.

ಮೇ 12ರಂದು ಪಲಿಮಾರು ಪೀಠದ ನೂತನ ಉತ್ತರಾಧಿಕಾರಿಯ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಲಿದ್ದು, ಸಾವಿರಾರು ಭಕ್ತರು ಉಪಸ್ಥಿತರಿರಲಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !