ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಚಿಕ್ಕಮಗಳೂರು ಕ್ಷೇತ್ರ: ಶೇ 75.91 ಮತದಾನ: ಶೃಂಗೇರಿ ಫಸ್ಟ್‌

ಚಿಕ್ಕಮಗಳೂರು ಲಾಸ್ಟ್‌
Last Updated 2 ಮೇ 2019, 16:19 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದದ ಶೇ 75.91ರಷ್ಟು ಮತದಾನವಾಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ 78.86 ಹಾಗೂ ಚಿಕ್ಕಮಗಳೂರಿನಲ್ಲಿ ಅತೀ ಕಡಿಮೆ ಶೇ 69.45ರಷ್ಟು ಮತದಾನವಾಗಿದೆ.

ಒಟ್ಟಾರೆ ಮತದಾನ ಪ್ರಮಾಣವನ್ನು ನೋಡುವುದಾದರೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಶೇ 77.66, ಉಡುಪಿಯಲ್ಲಿ ಶೇ 78.77, ಕಾಪುವಿನಲ್ಲಿ 77.89, ಕಾರ್ಕಳದಲ್ಲಿ 78.39 ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿಶೇ 78.86, ಮೂಡಿಗೆಯಲ್ಲಿ ಶೆ 74.79, ಚಿಕ್ಕಮಗಳೂರಿನಲ್ಲಿಶೇ 69.45 ಹಾಗೂ ತರೀಕೆರೆಯಲ್ಲಿ ಶೇ 72.18ರಷ್ಟು ಮತದಾನ ನಡೆದಿದೆ.

ಒಟ್ಟು 15,13,231 ಮತದಾರರ ಪೈಕಿ 11,48,700 ಮತದಾರರು ಮತ ಹಾಕಿದ್ದಾರೆ. 54 ಇತರರ ಪೈಕಿ 5 ಮಂದಿ ಮಾತ್ರ ವೋಟ್ ಮಾಡಿದ್ದಾರೆ.

ಮಹಿಳೆಯರು ಮುಂದು:

ಮತ ಹಾಕುವುದರಲ್ಲೂ ಮಹಿಳೆಯರು ಹಿಂದಿ ಬಿದ್ದಿಲ್ಲ.5,63,050 ಪುರುಷರು ಮತ ಹಾಕಿದರೆ, 5,85,645 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚು ಮತ ಹಾಕಿದರೆ,ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಕ್ಷೇತ್ರಗಳಲ್ಲಿ ಪುರುಷರು ಮುಂದಿದ್ದಾರೆ.

ಯಾವ ಕ್ಷೇತ್ರದಲ್ಲಿ ಎಷ್ಟು ಮತ ಚಲಾವಣೆ

ಕ್ಷೇತ್ರ–ಪುರುಷರು–ಮಹಿಳೆಯರು–ಒಟ್ಟು

ಕುಂದಾಪುರ–74,119–83,743–1,57,863

ಉಡುಪಿ–79,393–85,640–1,65,033

ಕಾಪು–67,320 –76,083 –1,43,403

ಕಾರ್ಕಳ–68,300– 75,565 –1,43,865

ಶೃಂಗೇರಿ–65481–65028 –1,30,509

ಮೂಡಿಗೆರೆ–63,772– 62,452 –1,26,225

ಚಿಕ್ಕಮಗಳೂರು–75,893 –73,392 –1,49,288

ತರೀಕೆರೆ–68,772– 63,742 –1,32,514

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT