ಬುಧವಾರ, ನವೆಂಬರ್ 13, 2019
18 °C

ತ್ರಿವಳಿ ತಲಾಕ್: ಪತಿ ವಿರುದ್ಧ ಪತ್ನಿ ದೂರು

Published:
Updated:

ಉಡುಪಿ: ಪತಿ ತ್ರಿವಳಿ ತಲಾಕ್ ನೀಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕುಂದಾಪುರದ ಆಲ್ಫಿಯಾ ಅಕ್ತರ್ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜುಲೈ 7ರಂದು ಹನೀಫ್‌ ಜತೆ ಕುಂದಾಪುರದ ಮೂಡುಗೋಪಾಡಿಯ ಮಸೀದಿಯಲ್ಲಿ ಮದುವೆ ನಡೆದಿತ್ತು. ಮದುವೆಗೂ ಮುನ್ನ ₹5 ಲಕ್ಷ ವರದಕ್ಷಿಣೆಗೆ ಪತಿಯ ಮನೆಯವರು ಬೇಡಿಕೆ ಇಟ್ಟಿದ್ದರು. ₹2 ಲಕ್ಷ ಹೊಂದಿಸಿ ಕೊಡಲಾಗಿತ್ತು. ಮದುವೆಯಾದ ಬಳಿಕ ವರದಕ್ಷಿಣಿ ಕಡಿಮೆಯಾಯಿತು ಎಂದು ಪತಿ ಹಾಗೂ ಆತನ ಸಂಬಂಧಿಗಳು ಕಿರುಕುಳ ನೀಡುತ್ತಿದ್ದರು.

ಆ.15ರಂದು ಪತಿ ಮೂರು ಬಾರಿ ತಲಾಕ್ ಹೇಳಿ, ಜೀವ ಬೆದರಿಕೆ ಹಾಕಿ ತವರು ಮನೆಗೆ ಕಳಿಸಿದ್ದಾರೆ ಎಂದು ಆಲ್ಫಿಯಾ ಅಕ್ತರ್‌ ದೂರಿನಲ್ಲಿ ತಿಳಿಸಿದ್ದಾರೆ.

2019ರ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ಪತಿ ಹನೀಫ್‌ ಹಾಗೂ ಸಂಬಂಧಿಗಳಾದ ಸೈಯದ್ ಅಬ್ಬಾಸ್‌, ಜೈತುನ್‌, ಆಯಿಷಾ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)