ಮಂಗಳವಾರ, ನವೆಂಬರ್ 30, 2021
21 °C

ಬ್ರಹ್ಮಾವರ: ಮಡಿಸಾಲು ಹೊಳೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬ್ರಹ್ಮಾವರ: ತಾಲ್ಲೂಕಿನ ಹೆರಂಜೆ ಬಳಿಯ ಮಡಿಸಾಲು ಹೊಳೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿಗಳಿಬ್ಬರು ಮೃತಪಟ್ಟಿದ್ದಾರೆ. 

ಬ್ರಹ್ಮಾವರದ ಆನಸ್‌ (16) ಹಾಗೂ ಚಾಂತಾರಿನ ಶ್ರೇಯಸ್‌ (18) ಮೃತರು. ಮಂಗಳವಾರ ಮಧ್ಯಾಹ್ನ ಸ್ನೇಹಿತ ಸಂಜಯರಾಜ್‌ ಜತೆ ಹೊಳೆಯಲ್ಲಿ ಈಜಲು ಹೋಗಿದ್ದಾಗ ಶ್ರೇಯಸ್‌ ಹಾಗೂ ಆನಸ್‌ ಮುಳುಗಿದ್ದರು. ರಾತ್ರಿಯಾದರೂ ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಪೊಲೀಸರಿಗೆ ನದಿಯ ದಡದಲ್ಲಿ ಶ್ರೇಯಸ್‌ ಮತ್ತು ಆನಸ್‌ನ ಬ್ಯಾಗ್‌ ಸಿಕ್ಕಿತ್ತು. ಈ ಸಂಬಂಧ ಸ್ನೇಹಿತ ಸಂಜಯರಾಜ್‌ನನ್ನು ವಿಚಾರಿಸಿದಾಗ ನದಿಯಲ್ಲಿ ಮುಳುಗಿರುವ ವಿಚಾರ ಬೆಳಕಿಗೆ ಬಂತು. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಶೋಧ ನಡೆಸಿದಾಗ ಬುಧವಾರ ಮೃತದೇಹಗಳು ಸಿಕ್ಕಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು