ಉಡುಪಿ: ಉಡುಪಿ ನಗರ ವ್ಯಾಪ್ತಿಯ ಕಳಪೆ ವಾಯು ಗುಣಮಟ್ಟದ ಕುರಿತು ಪರಿಸರ ಸಂಗಮ ವೇದಿಕೆಯು ನಗರಸಭೆಯ ಪೌರಾಯುಕ್ತರಿಗೆ ಪತ್ರ ಬರೆದಿದೆ.

ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ಉಡುಪಿ ನಗರದ ವಾಯು ಗುಣಮಟ್ಟವು ನಿಗದಿಪಡಿಸಿದ ಮಾಪನಕ್ಕಿಂತ (0–100) ಕಳಪೆ ಗುಣಮಟ್ಟದಲ್ಲಿ (160–180) ದಾಖಲಾಗುತ್ತಿದೆ ಎಂದು ವೇದಿಕೆಯು ಪತ್ರದಲ್ಲಿ ಉಲ್ಲೇಖಿಸಿದೆ.

ಮಾಲಿನ್ಯದ ಅಂಶಗಳ ಪ್ರಕಾರ ಪಿಎಂ 2.5 ಮೈಕ್ರಾನ್ಗಿಂತ ಕಡಿಮೆ ವ್ಯಾಸದ ಕಣಗಳು ಇರುವುದು ದಾಖಲಾಗುತ್ತಿದೆ. ಅತಿ ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು ಮತ್ತು ವೃದ್ಧರು ಶ್ವಾಸಕೋಶ ಸಂಬಂಧಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳಿರುವುದರಿಂದ ಕನಿಷ್ಠ ಎನ್ 95 ಮಾಸ್ಕ್ ಬಳಸುವ ಪರಿಸ್ಥಿತಿ ನಗರವಾಸಿಗಳದ್ದಾಗಿದೆ ಎಂದು ಹೇಳಿದೆ.

ನಗರಸಭೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳು ಮತ್ತು ಕಟ್ಟಡಗಳ ಆವರಣವನ್ನು ಹಸುರೀಕರಣಗೊಳಿಸುವುದು, ಸಾಧ್ಯವಾದೆಡೆ ಬಿದಿರು ತಳಿಗಳನ್ನು ಬೆಳೆಸುವ ಮೂಲಕ ಇಂಗಾಲದ ಮಟ್ಟವನ್ನು ನಿಯಂತ್ರಿಸಿ ನಗರದಲ್ಲಿ ಆಮ್ಲಜನಕದ ಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು. 2026–27ನೇ ಸಾಲಿನ ಬಜೆಟ್ನಲ್ಲಿ ಅದಕ್ಕೆ ಆದ್ಯತೆ ನೀಡಬೇಕು ಎಂದೂ ಆಗ್ರಹಿಸಿದೆ.

ವೇದಿಕೆಯ ಮಮತಾ ರೈ, ಪ್ರೇಮಾನಂದ ಕಲ್ಮಾಡಿ, ಸರೋಜಾ ಭಟ್, ಉಮಾಶಂಕರ ಎನ್.ಎಸ್. ಸೇರಿದಂತೆ ಹಲವರು ಪತ್ರಕ್ಕೆ ಸಹಿ ಹಾಕಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-28-1846712490

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.