ಉಡುಪಿ: ಆಟೊ ಎಲ್ಪಿಜಿ ದರ ಏರಿಕೆ ಮತ್ತು ಪೂರೈಕೆ ಕೊರತೆಯಿಂದಾಗಿ ಜಿಲ್ಲೆಯ ರಿಕ್ಷಾ ಚಾಲಕರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕೆಲ ದಿನಗಳ ಹಿಂದೆ ಕೆ.ಜಿ.ಗೆ ₹65 ಇದ್ದ ಆಟೊ ಎಲ್ಪಿಜಿ ದರವು ಕೆ.ಜಿ.ಗೆ ₹ 92ಕ್ಕೆ ಏರಿಕೆಯಾಗಿರುವುದು ದೊಡ್ಡ ಹೊಡೆತ ನೀಡಿದೆ ಎಂದು ರಿಕ್ಷಾ ಚಾಲಕರು ತಿಳಿಸಿದ್ದಾರೆ.

ನಗರದ ಗೋ ಗ್ಯಾಸ್ ಬಂಕ್ ಸೇರಿದಂತೆ ಕೆಲವು ಬಂಕ್ಗಳಿಗೆ ನಾಲ್ಕೈದು ದಿನಗಳಿಂದ ಆಟೊ ಎಲ್ಪಿಜಿ ಪೂರೈಕೆಯಾಗದೆ ವ್ಯವಹಾರ ಸ್ಥಗಿತವಾಗಿದೆ ಎಂದು ಬಂಕ್ನ ಮೂಲಗಳು ತಿಳಿಸಿವೆ.

‘ಉಡುಪಿ ನಗರದಲ್ಲೇ ಆಟೊ ಎಲ್ಪಿಜಿ ಬಳಸುವ ಮೂರು ಸಾವಿರಕ್ಕೂ ಹೆಚ್ಚು ಆಟೊ ರಿಕ್ಷಾಗಳಿವೆ. ಯಾವ ಬಂಕ್ಗಳಿಗೆ ಹೋದರೂ ಗ್ಯಾಸ್ ಸಿಗುತ್ತಿಲ್ಲ. ಒಂದೊಂದು ಬಂಕ್ನವರು ಒಂದೊಂದು ರೀತಿಯಲ್ಲಿ ದರ ಪಡೆದುಕೊಳ್ಳುತ್ತಾರೆ. ಕೆಲವು ಬಂಕ್ನವರು ಕೆ.ಜಿ.ಗೆ ₹130 ನೀಡಿದರೆ ಗ್ಯಾಸ್ ನೀಡುತ್ತೇವೆ ಎನ್ನುತ್ತಿದ್ದಾರೆ ’ ಎಂದು ಉಡುಪಿ ನಗರ ರಿಕ್ಷಾ ಚಾಲಕರ, ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಆರೋಪಿಸಿದರು.

‘ಗ್ಯಾಸ್ ಬಂಕ್ಗಳ ಮುಂದೆ ಸರದಿಯಲ್ಲಿ ನಿಂತರೂ ಆಟೊ ಎಲ್ಪಿಜಿ ಸಿಗುತ್ತಿಲ್ಲ. ಇದರಿಂದ ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆ. ಗ್ಯಾಸ್ ದರ ಏರಿಕೆಯಾದರೂ ಪ್ರಯಾಣ ದರ ಏರಿಕೆ ಮಾಡಲೂ ಆಗದೆ ನಮಗೆ ನಷ್ಟ ಉಂಟಾಗುತ್ತಿದೆ’ ಎಂದು ಅವರು ತಿಳಿಸಿದರು.

‘ರಿಕ್ಷಾ ಚಾಲಕರಿಗೆ ಸಮಸ್ಯೆಯಾಗುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸಿಲ್ಲ. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ರಿಕ್ಷಾ ಚಾಲನೆಯನ್ನೇ ನಿಲ್ಲಿಸಬೇಕಾದ ಸ್ಥಿತಿ ಉಂಟಾಗಬಹುದು’ ಎಂದು ಬನ್ನಂಜೆಯ ರಿಕ್ಷಾ ಚಾಲಕ ಅಶ್ವಿನ್ ನಾಯಕ್ ಹೇಳಿದರು.

‘ಆಟೊ ಎಲ್ಪಿಜಿ ದರವನ್ನು ಏಕಾಏಕಿ ಏರಿಕೆ ಮಾಡಿರುವುದರಿಂದ ನಮಗೆ ತುಂಬಾ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿಯವರು ಮುತುವರ್ಜಿ ವಹಿಸಿ ಸಮಸ್ಯೆ ಪರಿಹರಿಸಬೇಕು. ಗ್ಯಾಸ್ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-28-1740274499

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.