ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌: ಉಡುಪಿಯ ವ್ರಜೇಶ್‌ಗೆ 13ನೇ ರ‍್ಯಾಂಕ್‌

Last Updated 8 ಸೆಪ್ಟೆಂಬರ್ 2022, 15:59 IST
ಅಕ್ಷರ ಗಾತ್ರ

ಉಡುಪಿ: ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ಉಡುಪಿಯ ಅವಳಿ ಸಹೋದರರಾದ ವ್ರಜೇಶ್‌
ಹಾಗೂ ವೃಶಾನ್‌ ನೀಟ್ ಪರೀಕ್ಷೆಯಲ್ಲೂ ಉತ್ತಮ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ವ್ರಜೇಶ್‌ 720ಕ್ಕೆ 710 ಅಂಕಗಳನ್ನು ಪಡೆದು ಆಲ್‌ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ 13ನೇ ರ‍್ಯಾಂಕ್‌ ಪಡೆದರೆ ವೃಶಾನ್ 682 ಅಂಕ ಪಡೆದು 547ನೇ ರ‍್ಯಾಂಕ್‌ ಪಡೆದಿದ್ದಾರೆ.

ವ್ರಜೇಶ್‌ ಸಿಇಟಿ ಬಿಎನ್‌ವೈಎಸ್‌ನಲ್ಲಿ 2ನೇ ರ‍್ಯಾಂಕ್‌, ಅಗ್ರಿಕಲ್ಚರ್‌ನಲ್ಲಿ 9, ವೆಟರ್ನರಿ ಸೈನ್ಸ್‌ನಲ್ಲಿ 6 ಹಾಗೂ ಫಾರ್ಮಸಿಯಲ್ಲಿ 7ನೇ ರ‍್ಯಾಂಕ್‌ ಪಡೆದಿದ್ದರು. ವೃಶಾನ್‌ ಬಿಎನ್‌ವೈಸ್‌ನಲ್ಲಿ 5, ವೆಟರ್ನರಿ ಸೈನ್ಸ್‌ನಲ್ಲಿ 5 ಹಾಗೂ ಫಾರ್ಮಸಿಯಲ್ಲಿ 9ನೇ ರ‍್ಯಾಂಕ್‌ ಪಡೆದಿದ್ದರು. ಇಬ್ಬರೂ ವೈದ್ಯರಾಗುವ ಗುರಿ ಹೊಂದಿದ್ದು ಮಣಿಪಾಲದ ರೇಖಾ ಶೆಟ್ಟಿ ಹಾಗೂ ವೀಣಾಧರ ಶೆಟ್ಟಿ ದಂಪತಿಯ ಪುತ್ರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT