ಉಡುಪಿ: ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭವು ಏ. 20ರಂದು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಲಿದ್ದು, ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ.

ಸಂತೆಕಟ್ಟೆ ಬಸ್ ನಿಲ್ದಾಣದಿಂದ ಮಿಲಾಗ್ರಿಸ್ ಪ್ರಧಾನಾಲಯಕ್ಕೆ ತೆರಳುವ ಮಾರ್ಗವನ್ನು ಸಂಪೂರ್ಣವಾಗಿ ಅಲಂಕರಿಸಲಾಗಿದ್ದು, ಬೃಹತ್ ಗಾತ್ರದ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ದಾರಿಯುದ್ದಕ್ಕೂ ಶುಭಾಶಯ ಕೋರುವ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಕಾರ್ಯಕ್ರಮದ ಪ್ರಧಾನ ವೇದಿಕೆ ಸಿದ್ಧಗೊಂಡಿದೆ.

ವೇದಿಕೆಯಲ್ಲಿ ಸುಮಾರು 35 ಧರ್ಮಾಧ್ಯಕ್ಷರು ಆಸೀನರಾಗಲಿದ್ದು, ಬಲಿಪೂಜೆಯ ಬಳಿಕ ಸಾರ್ವಜನಿಕ ಅಭಿನಂದನಾ ಸಮಾರಂಭ ಕೂಡ ಅದೇ ವೇದಿಕೆಯಲ್ಲಿ ಜರುಗಲಿದೆ. ಭಕ್ತಾದಿಗಳಿಗೆ ಕುಳಿತುಕೊಳ್ಳಲು ಬೃಹತ್ ಪೆಂಡಾಲ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಬಿಸಿಲಿನ ಶಾಖ ವಿಪರೀತ ಇರುವ ನಿಟ್ಟಿನಲ್ಲಿ ಸಾಕಷ್ಟು ಸಂಖ್ಯೆ ಫ್ಯಾನ್ ವ್ಯವಸ್ಥೆಯ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ 250ಕ್ಕೂ ಅಧಿಕ ಧರ್ಮಗುರುಗಳು, ಅಷ್ಟೇ ಸಂಖ್ಯೆ ಧರ್ಮಭಗಿನಿಯರು ಹಾಗೂ 6000 ಮಂದಿ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಪಾರ್ಕಿಂಗ್ ಸ್ಥಳಗಳು: ಮಿಲಾಗ್ರಿಸ್ ಪ್ರಧಾನಾಲಯದ ಆವರಣದಲ್ಲಿ ನುನ್ಸಿಯೋ, ಕಾರ್ಡಿನಲ್, ಆರ್ಚ್ ಬಿಷಪ್ ಮತ್ತು ಇತರ ಧರ್ಮಾ ಧ್ಯಕ್ಷರುಗಳು, ಮಾಧ್ಯಮ ಹಾಗೂ ಗಾಯನ ತಂಡದ ವಾಹನಗಳು, ಮಿಲಾಗ್ರಿಸ್ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ಕಾಲೇಜು ಆವರಣದಲ್ಲಿ ಧರ್ಮಗುರುಗಳು ಹಾಗೂ ಧರ್ಮಭಗಿನಿಯರು, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ ಆವರಣದಲ್ಲಿ ಸಾರ್ವಜನಿಕರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ.

ವಿಲ್ಸನ್ ಫೆರ್ನಾಂಡಿಸ್ ಮೈದಾನದಲ್ಲಿ ಶಂಕರಪುರ ಮತ್ತು ಶಿರ್ವ ಚರ್ಚಿನ ಭಕ್ತಾದಿಗಳ ವಾಹನಗಳು(ಬಸ್ಸುಗಳನ್ನು ಹೊರತುಪಡಿಸಿ), ಪೈ ಶಾಲಾ ಆವರಣದಲ್ಲಿ ಗೌರವ ಅತಿಥಿಗಳು, ಜೊವಿಟಾ ಮೈದಾನ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ. ಮಿಲಾಗ್ರಿಸ್ ಹೋಮ್ನಲ್ಲಿ ಧರ್ಮಾಧ್ಯಕ್ಷರ ವಾಹನಗಳು, ಆಲ್ವಿನ್ ನಜರೆತ್ ಮೈದಾನದಲ್ಲಿ ಕೆಮ್ಮಣ್ಣು, ಮೌಂಟ್ ರೋಸರಿ, ತೊಟ್ಟಂ, ಮಿಲಾಗ್ರಿಸ್ ಚರ್ಚಿನ ಭಕ್ತಾದಿಗಳ ವಾಹನ ನಿಲುಗಡೆಗೆ ಮತ್ತು ವಾಹನ ದಟ್ಟಣೆ ಹೆಚ್ಚಾದಲ್ಲಿ ನೇಜಾರು ಮೈದಾನದಲ್ಲಿ ಕೂಡ ನಿಲುಗಡೆಗೆ ಅವಕಾಶ ನೀಡಲಾಗಿದೆ.

ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ ಆವರಣದಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಕಾರ್ಯಕ್ರಮದ ಸ್ಥಳದ ವರೆಗೆ ತಲುಪಿಸಲು ಪ್ರತ್ಯೇಕ ಬಸ್ಗಳು ಮತ್ತು ಟೆಂಪೊ ವ್ಯವಸ್ಥೆ ಮಾಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-28-1758824856

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.