ಬ್ರಹ್ಮಾವರ: ಡಿಜಿಟಲ್ ಚಾನೆಲ್ನಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡಿದ್ದಕ್ಕೆ ವ್ಯಕ್ತಿಯೊಬ್ಬರು ತನ್ನ ಬೆಂಬಲಿಗರೊಂದಿಗೆ ವರದಿಗಾರನ ಮನೆಗೆ ಅಕ್ರಮ ಪ್ರವೇಶ ಮಾಡಿ, ಕೊಲೆ ಬೆದರಿಕೆ ಹಾಕಿರುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಡ್ಡರ್ಸೆ ಗ್ರಾಮದ ಕುಂಬಾರಬೆಟ್ಟುವಿನ ಪತ್ರಕರ್ತ ಪ್ರಣುತ್ ಕುಮಾರ್ ಎಂಬುವವರು ಈಚೆಗೆ ಮೀನುಗಾರಿಕೆ ಹಾಗೂ ಕೊಜೆ ಮಣ್ಣಿನ ವಿಚಾರವಾಗಿ ವರದಿ ಮಾಡಿದ್ದರು. ಈ ವರದಿಯಿಂದ ಕುಪಿತಗೊಂಡ ಅಜಿತ್ ಕುಮಾರ್ ಶೆಟ್ಟಿ, ಯಾಳಹಕ್ಲು ಚಂದ್ರಶೆಟ್ಟಿ ಹಾಗೂ ಅಪರಿಚಿತ ಮಹಿಳೆಯೊಬ್ಬರು ಏ.15ರಂದು ಪ್ರಣುತ್ ಅವರ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆ- ಪ್ರಕರಣ ದಾಖಲು: ಮೂಡುಗಿಳಿಯಾರು ಗ್ರಾಮದ ಆರತಿ ಗಿಳಿಯಾರು ಎಂಬುವವರಿಗೆ ಹಲ್ಲೆ ನಡೆಸಿದ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಣುತ್ ಗಾಣಿಗ ಎಂಬುವವರ ಮನೆ ಹತ್ತಿರದ ಜಾಗದಲ್ಲಿ ಒತ್ತುವರಿ ಮಾಡಿ ಶೆಡ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿ ಜಿಪಿಎಸ್ ಪೋಟೊ ತೆಗೆಯುತ್ತಿದ್ದಾಗ ಪ್ರಣುತ್ ಹಾಗೂ ಇತರರು ಹಲ್ಲೆ ಮಾಡಿರುವುದಾಗಿ ಪತ್ರಕರ್ತೆ ಆರತಿ ಗಿಳಿಯಾರು ದೂರಿನಲ್ಲಿ ಆರೋಪಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-28-1777715524

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.