ಬುಧವಾರ, ಜುಲೈ 15, 2020
22 °C
ರಸ್ತೆಗಿಳಿದ ಶೇ 25ರಷ್ಟು ಬಸ್‌ಗಳು

ಉಡುಪಿ | 7560 ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಸೋಮವಾರದಿಂದ ಅಂತರ ಜಿಲ್ಲೆಗಳ ಮಧ್ಯೆ ಖಾಸಗಿ ಬಸ್‌ಗಳ ಓಡಾಟ ಆರಂಭವಾಗಿದ್ದು, ಉಡುಪಿಯಲ್ಲಿ ಶೇ 25ರಷ್ಟು ಬಸ್‌ಗಳು ಸಂಚರಿಸಿದವು. ನಗರ ಸಾರಿಗೆಯ 25 ಬಸ್‌ಗಳು ಹಾಗೂ ಮಂಗಳೂರು–ಉಡುಪಿ ಮಾರ್ಗದ ಮಧ್ಯೆ 70 ಸರ್ವೀಸ್‌ ಬಸ್‌ಗಳು ಸಂಚರಿಸಿದವು ಎಂದು ಕೆನರಾ ಬಸ್‌ ಮಾಲೀಕರ ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.

ಕುಂದಾಪುರ, ಕಾರ್ಕಳ, ಬೈಂದೂರು, ಪಡುಬಿದ್ರಿ, ಕಾಪು ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಬಸ್‌ಗಳು ನಿರಂತರವಾಗಿ ಸಂಚರಿಸಿದವು. ಆದರೆ,  ಸದ್ಯ, ಮಂಗಳೂರು–ಉಡುಪಿ ಮಧ್ಯೆ ಮಾತ್ರ ಸರ್ವೀಸ್‌ ಬಸ್‌ಗಳು ಓಡಾಡಿದವು. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರಲಿಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿರುವುದರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದೆ, ಪ್ರಯಾಣಿಕರ ಅನುಕೂಲ ಹಾಗೂ ಪರಿಸ್ಥಿತಿ ನೋಡಿಕೊಂಡು ಹಂತ ಹಂತವಾಗಿ ಬಸ್‌ಗಳನ್ನು ರಸ್ತೆಗಿಳಿಸಲಾಗುವುದು ಎಂದು ತಿಳಿಸಿದರು.

ಸೋಮವಾರ ಒಟ್ಟು 7,560 ಪ್ರಯಾಣಿಕರು ಸಂಚರಿಸಿದ್ದಾರೆ. ಒಟ್ಟಾರೆ, ಆದಾಯದಲ್ಲಿ ಖರ್ಚು, ವೇತನ ಕಳೆದರೆ ಬಸ್‌ ಮಾಲೀಕರಿಗೆ ನಷ್ಟವಾಗುತ್ತಿದೆ. ಮುಂದೆ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸವಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು