ಉಡುಪಿ: ‘ಸರಕು ಉತ್ಪಾದನೆ ಮತ್ತು ಲಾಭದ ದೃಷ್ಟಿಯನ್ನು ಹೊಂದಿರುವ ಬಂಡವಾಳಶಾಹಿಯು ಇಂದು ಸಮಾಜದ ಎಲ್ಲರನ್ನೂ ಅದರ ದಾಸರನ್ನಾಗಿಸಿದೆ’ ಎಂದು ಚಿಂತಕ ಕೆ. ಫಣಿರಾಜ್ ಹೇಳಿದರು.

ಭಾರತ ಜ್ಞಾನ–ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಗರದ ಎಂಜಿಎಂ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರೊ. ಮಾಧವ ಗಾಡ್ಗೀಳ್ ನೆನಪಿನ ಪರಿಸರ ಮತ್ತು ಶಿಕ್ಷಣ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಂಡವಾಳಶಾಹಿಯು ಅದರ ಸರಕುಗಳನ್ನು ನಿತ್ಯವೂ ಜನರು ಕೊಂಡುಕೊಳ್ಳುವಂತಹ ಅನಿವಾರ್ಯತೆಯನ್ನು ಸೃಷ್ಟಿಸುತ್ತಿದೆ. ನಾವು ಅದರ ಸರಪಳಿಯನ್ನು ಕಡಿಯದೆ ಹೋದರೆ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ ಎಂದರು.

ಬಂಡವಾಳಶಾಹಿಯ ವಿಷ ವರ್ತುಲಕ್ಕೆ ಪೆಟ್ಟುಕೊಡದೆ ಪರಿಸರ ರಕ್ಷಣೆಗಾಗಿ ನಾವು ಏನೆಲ್ಲ ಪ್ರಯತ್ನ ಮಾಡುತ್ತೇವೋ ಅವೆಲ್ಲವೂ ವ್ಯರ್ಥ ಎಂದು ತಿಳಿಸಿದರು.

ಪರಿಸರದ ಬಗ್ಗೆ ಮಾತನಾಡುವವರು ಶಿಕ್ಷಣದ ಬಗ್ಗೆಯೂ ಮಾತನಾಡಬೇಕು. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಬಂಡವಾಳಶಾಹಿಯ ಪ್ರಭಾವದ ವಿರುದ್ಧ ಹೋರಾಟ ಮಾಡಬೇಕು. ಹೀಗೆ ಎಲ್ಲರು ಸೇರಿ ಗುದ್ದು ಕೊಟ್ಟಾಗ ಯುದ್ಧ ಇಲ್ಲದ ಶಾಂತಿಯುತ ನಾಡನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಶುಭಂಕರ್ ಚಕ್ರವರ್ತಿ ವಹಿಸಿದ್ದರು. ಚೆನ್ನೈನ ಕಂಪ್ಯೂಟರ್ ವಿಜ್ಞಾನಿ ಆರ್.ರಾಮಾನುಜಂ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲೆಯ ಅಧ್ಯಕ್ಷೆ ಸೌಭಾಗ್ಯ ಸಿ. ಮಾತನಾಡಿದರು.

ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎ.ಪ್ರಶಾಂತ ಬಾಬು ಉಪಸ್ಥಿತರಿದ್ದರು.

ಟೀಚರ್ ಶೈಕ್ಷಣಿಕ ಪತ್ರಿಕೆಯ ಸಂಪಾದಕ ಉದಯ ಗಾಂವಕಾರ ಸ್ವಾಗತಿಸಿದರು. ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ವಂದಿಸಿದರು. ರವಿ ಕಟ್ಕೆರೆ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-28-1359207264

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.