ಉಡುಪಿ ಮಗು ಅಪಹರಣ ಪ್ರಕರಣಕ್ಕೆ ತಿರುವು: ಕಿಡ್ನಾಪ್ ಅಲ್ಲ, ನದಿಗೆ ಬಿದ್ದು ಸಾವು

ಶುಕ್ರವಾರ, ಜೂಲೈ 19, 2019
26 °C
ಮಗು ಅಪಹರಣ ಪ್ರಕರಣಕ್ಕೆ ತಿರುವು

ಉಡುಪಿ ಮಗು ಅಪಹರಣ ಪ್ರಕರಣಕ್ಕೆ ತಿರುವು: ಕಿಡ್ನಾಪ್ ಅಲ್ಲ, ನದಿಗೆ ಬಿದ್ದು ಸಾವು

Published:
Updated:
Prajavani

ಉಡುಪಿ: ಕುಂದಾಪುರ ತಾಲ್ಲೂಕಿನ ಯಡಮೊಗ್ಗೆ ಕುಮ್ಟಿಬೇರು ಗ್ರಾಮದಲ್ಲಿ ಗುರುವಾರ ನಡೆದಿದ್ದ ಮಗುವಿನ ಅಪಹರಣ ಪ್ರಕರಣ ತಿರುವು ಪಡೆದುಕೊಂಡಿದೆ. ತಾಯಿ ರೇಖಾನಾಯ್ಕ ಇಬ್ಬರು ಮಕ್ಕಳ ಜತೆಗೆ ಕುಬ್ಜ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭ ಹೆಣ್ಣು ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ರೇಖಾ ನಾಯ್ಕ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಮಗುವನ್ನು ಅಪಹರಣಕಾರ ಕದ್ದೊಯ್ದಿದ್ದಾನೆ ಎಂಬ ಕಥೆ ಕಟ್ಟಿದ್ದರು. ಶುಕ್ರವಾರ ಬೆಳಿಗ್ಗೆ ಕುಬ್ಜ ನದಿಯಲ್ಲಿ 1 ವರ್ಷ 3 ತಿಂಗಳ ಕಂದಮ್ಮ ಸಾನ್ವಿಕಾಳ ಮೃತದೇಹ ಪತ್ತೆಯಾಗಿತ್ತು.

ಇದರಿಂದ ಅನುಮಾನ ಗೊಂಡು ತಾಯಿಯನ್ನು ವಿಚಾರಣೆಗೊಳಪಡಿಸಿದಾಗ, 5 ವರ್ಷದ ಗಂಡು ಮಗು ಹಾಗೂ ಕಂದಮ್ಮ ಸಾನ್ವಿಕಾ ಜತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ನಿಜ. ಈ ಸಂದರ್ಭ ಹೆಣ್ಣು ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಇಬ್ಬರು ಮಾತ್ರ ಬದುಕುಳಿದೆವು ಎಂದು ರೇಖಾ ನಾಯ್ಕ ಹೇಳಿಕೆ ನೀಡಿದ್ದಾರೆ ಎಂದು ಎಸ್‌ಪಿ ನಿಶಾ ಜೇಮ್ಸ್‌ ತಿಳಿಸಿದರು.

ರೇಖಾ ನಾಯ್ಕ ವಿರುದ್ಧ ಕ್ರಮಕ್ಕೆ ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !