ಉಡುಪಿ: ‘ಕ್ರೈಸ್ತ ಸಮುದಾಯದವರು ಎಂದೂ ದ್ವೇಷ ಭಾವನೆಗೆ ಅವಕಾಶ ನೀಡದೆ, ವಿರೋಧ ಮಾಡಿದವರನ್ನು ಕೂಡ ಪ್ರೀತಿಸುವ ಗುಣ ಹೊಂದಿದವರು’ ಎಂದು ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ಪ್ರಶಾಂತ್ ಜತ್ತನ್ನ ಹೇಳಿದರು.

ಮೋಹನ್ ಸಿ. ಲಾಝರಸ್ ನೇತೃತ್ವದಲ್ಲಿ ಇಲ್ಲಿನ ಮಿಷನ್ ಕಾಂಪೌಂಡಿನಲ್ಲಿ ನಡೆದ ‘ಸಮಾಧಾನ ಮಹೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾಧಾನ ಮಹೋತ್ಸವ’ದಲ್ಲಿ ನಡೆದಿರುವ ಪ್ರಾರ್ಥನೆ ಕೂಡ ಯಾರನ್ನೂ ಕೂಡ ದ್ವೇಷ ಮಾಡಲು ಅಥವಾ ಬೇರೆ ಧರ್ಮವನ್ನು ಅವಹೇಳನ ಮಾಡಲು ನಡೆದಿಲ್ಲ. ಬದಲಾಗಿ ನಮ್ಮ ಆಧ್ಯಾತ್ಮಿಕ ಜೀವನಕ್ಕೆ ಒಳಿತಾಗುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದು ಶಾಂತಿಯ ದೂತರಾಗಿ ಪ್ರತಿಯೊಬ್ಬರೂ ಕಾರ್ಯಾಚರಿಸೋಣ’ ಎಂದರು.

ಉಡುಪಿ ಧರ್ಮಪ್ರಾಂತ್ಯದ ಹೆರಾಲ್ಡ್ ಪಿರೇರ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕ್ಯಾಸ್ತಲಿನೊ, ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್ ಆರಾನ್ಹ, ಕರ್ನಾಟಕ ಸದರ್ನ್ ಡಯೋಸಿಸ್ ವಲಯಾಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿದರು. ಚರ್ಚ್ ಆಫ್ ಫೆಲೋಶಿಪ್ ಸಂಚಾಲಕ ಡಾ.ಸುಶೀಲ್ ಜತ್ತನ್ನ, ಕಾರ್ಯದರ್ಶಿ ಸೆಲ್ವಕುಮಾರ್, ಕೋಶಾಧಿಕಾರಿ ಸೆಲಿನಾ ಕರ್ಕಡ, ಉಪಾಧ್ಯಕ್ಷರಾದ ವರ್ಗಿಸ್, ಪಾವ್ಲೋಸ್, ಸ್ಟೀಫನ್ ಜಮಖಂಡಿ, ಚಂದ್ರಶೇಖರ್, ಸುಧಾಕರ್ ಗೋಝರ್ ಭಾಗವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲೆಯ ವಿವಿಧೆಡೆಯ 12 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಮೋಹನ್ ಸಿ. ಲಾಝರಸ್ ಅವರು ಮೂರು ದಿನ ದೇವರ ವಾಕ್ಯದ ಮೇಲೆ ವಿಶೇಷ ಪ್ರವಚನಗಳನ್ನು ನೀಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-28-2046447143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.