ಬ್ರಹ್ಮಾವರ: ಮೆಸ್ಕಾಂ ವತಿಯಿಂದ ಈಚೆಗೆ ನಡೆದ ಉಪವಿಭಾಗ ಮಟ್ಟದ ಗ್ರಾಹಕರ ಜನಸಂಪರ್ಕ ಸಭೆಯು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಸಾಕ್ಷಿಯಾಯಿತು.

ವಿದ್ಯುತ್ ಬಿಲ್ನಲ್ಲಿನ ದಿಢೀರ್ ಏರಿಕೆ, ಅಕ್ರಮ ಟಿ.ಸಿ ಸ್ಥಳಾಂತರ ಹಾಗೂ ಕಾಮಗಾರಿಗಳ ಹೆಸರಿನಲ್ಲಿ ನಡೆಸಲಾಗುತ್ತಿರುವ ತಾರತಮ್ಯದ ಬಗ್ಗೆ ಗ್ರಾಹಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆಯ ಆರಂಭದಲ್ಲೇ ಮಾಸಿಕ ವಿದ್ಯುತ್ ಬಿಲ್ನಲ್ಲಿ ವಿಪರೀತ ಹೆಚ್ಚುವರಿ ಶುಲ್ಕ ವಿಧಿಸಿರುವುದನ್ನು ವಿರೋಧಿಸಿ ಕೋಟತಟ್ಟು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರವೀಂದ್ರ ತಿಂಗಳಾಯ ಹಾಗೂ ಅನೇಕರು ಬಿಲ್ ಹಿಡಿದು ಪ್ರತಿಭಟನೆ ನಡೆಸಿದರು. ‘ಗೃಹಜ್ಯೋತಿ ಯೋಜನೆಯ ಹೆಸರಿನಲ್ಲಿ ಸರ್ಕಾರ ಮತ್ತು ಮೆಸ್ಕಾಂ ಗ್ರಾಹಕರಿಗೆ ಬರೆ ಎಳೆಯುತ್ತಿವೆ. ಇದು ಹಗಲು ದರೋಡೆಗಿಂತ ಕಡಿಮೆಯಿಲ್ಲದ ಡಿಜಿಟಲ್ ಹಗರಣ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಧ್ವನಿಗೂಡಿಸಿದ ರಾಘವೇಂದ್ರ ಐರೋಡಿ, ಸಾಮಾನ್ಯ ಜನರ ಹಣಕ್ಕೆ ಬೆಲೆಯೇ ಇಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸೂಪರಿಟೆಂಡಿಂಗ್ ಎಂಜಿನಿಯರ್ ಬಿ.ರಾಕೇಶ್ ಕುಮಾರ್, ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆದು ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹೆದ್ದಾರಿ ಕಾಮಗಾರಿ ನೆಪದಲ್ಲಿ ಪ್ರತಿ ಮಂಗಳವಾರ ವಿದ್ಯುತ್ ಸ್ಥಗಿತಗೊಳಿಸುವುದರ ಬಗ್ಗೆ ನಾಗರಾಜ್ ಗಾಣಿಗ ಮತ್ತು ಸುರೇಶ್ ಗಿಳಿಯಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದೆಡೆ ವಿಪರೀತ ತಾಪಮಾನ, ಮತ್ತೊಂದೆಡೆ ಮನೆಯಲ್ಲಿ ವಿದ್ಯುತ್ ಇಲ್ಲದೆ ಜನ ಪರದಾಡುತ್ತಿದ್ದಾರೆ. ಹೀಗಾಗುವುದಾದರೆ ಕೋಟ ಹೋಬಳಿಯಲ್ಲಿ ಮಂಗಳವಾರವನ್ನು ಅಧಿಕೃತವಾಗಿ ‘ವಿದ್ಯುತ್ ರಹಿತ ದಿನ’ ಎಂದು ಘೋಷಿಸಿಬಿಡಿ ಎಂದು ವ್ಯಂಗ್ಯವಾಡಿದರು. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಕೋಟ ಹನುಮಾನ್ ಬಟ್ಟೆ ಮಳಿಗೆ ಎದುರಿದ್ದ ಟಿ.ಸಿ.ಯನ್ನು ಸಾರ್ವಜನಿಕ ಓಡಾಟದ ಸ್ಥಳ ಹಾಗೂ ಕುಡಿಯುವ ನೀರಿನ ಘಟಕದ ಬಳಿ ಸ್ಥಳಾಂತರಿಸಿರುವುದಕ್ಕೆ ಸುರೇಶ್ ಗಿಳಿಯಾರ್ ವಿರೋಧ ವ್ಯಕ್ತಪಡಿಸಿದರು. ‘ಖಾಸಗಿ ಮಳಿಗೆಯ ಲಾಭಕ್ಕಾಗಿ ನಿಯಮಬಾಹಿರವಾಗಿ ಟಿ.ಸಿ ಅಳವಡಿಸಲಾಗಿದೆ. ದಾಖಲೆಗಳಿಲ್ಲದೆ ಮೂರು ಅಂತಸ್ತಿನ ಮಳಿಗೆಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದು ಶ್ರೀಮಂತರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು. ತಕ್ಷಣವೇ ಅಕ್ರಮ ಸಂಪರ್ಕ ತೆರವುಗೊಳಿಸಿ ದಂಡ ವಿಧಿಸುವಂತೆ ಆಗ್ರಹಿಸಿದರು. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಎಂಜಿನಿಯರ್ ಪ್ರಶಾಂತ್ ಶೆಟ್ಟಿ ಅವರಿಗೆ ಎಸ್ ಇ ರಾಕೇಶ್ಕುಮಾರ್ ಸೂಚಿಸಿದರು.

ಸಾಲಿಗ್ರಾಮದ ಡಿವೈನ್ ಪಾರ್ಕ್ ಬಳಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಿ ಇತರ ಕಡೆ ಓಪನ್ ಕೇಬಲ್ ಇರಿಸಿರುವುದರ ಬಗ್ಗೆಯೂ ನಾಗರಾಜ್ ಗಾಣಿಗ ಪ್ರಶ್ನಿಸಿದರು. ಈ ತಾರತಮ್ಯದ ಬಗ್ಗೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಂಜಿನಿಯರ್ ರಾಕೇಶ್ ಕುಮಾರ್ ಹೇಳಿದರು.

ಸಭೆಯಲ್ಲಿ ಕುಂದಾಪುರ ಕಾರ್ಯನಿರ್ವಾಹಕ ಎಂಜಿನಿಯರ್ ಯಶವಂತ, ಲೆಕ್ಕಾಧಿಕಾರಿಗಳಾದ ಶಿವ ಕುಮಾರ್, ಕೆ.ಮಹೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರತಾಪ್ಚಂದ್ರ ಶೆಟ್ಟಿ, ತಾಂತ್ರಿಕ ಎಂಜಿನಿಯರ್ ಶ್ರೀಕಾಂತ್, ಎಂಜಿನಿಯರ್ ಪ್ರಶಾಂತ್ ಶೆಟ್ಟಿ, ವಿವಿಧ ಶಾಖಾಧಿಕಾರಿಗಳಾದ ಮಹೇಶ್, ವೈಭವ್ ಶೆಟ್ಟಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-28-190104623

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.