ಉಡುಪಿ: ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಒಂದೇ ಜಲವಾಹನ ಇರುವುದರಿಂದ ಸಿಟಿ ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿರುವ ಬಗ್ಗೆ ಕರೆ ಬಂದ ತಕ್ಷಣ ಬೇರೆ ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಿ ಅತೀ ವೇಗವಾಗಿ ಉಡುಪಿಯ ಖಾದರ್ ವಾಣಿಜ್ಯ ಕಟ್ಟಡದ ಘಟನಾ ಸ್ಥಳಕ್ಕೆ ತೆರಳಲಾಗಿತ್ತು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ.

ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ನಿಯಂತ್ರಣ ಸಾಧಿಸಲು ತುಂಬಾ ಕಷ್ಟವಾಗಿತ್ತು. ಸಿಬ್ಬಂದಿ ಪ್ರಾಣದ ಹಂಗು ತೊರೆದು ಕಟ್ಟಡದ ಒಳಗೆ ನುಗ್ಗಿ ನೀರನ್ನು ನಿರಂತರ ಹಾಯಿಸಿ ಕಾರ್ಯಚರಣೆ ಮಾಡಿ ಜನರ ಪ್ರಾಣ ಹಾಗೂ ಅಂದಾಜು ಹದಿನೇಳು ಅಂಗಡಿಗಳು, 6 ಬೈಕ್ಗಳು ಹಾಗೂ ಪಕ್ಕದಲ್ಲೇ ಇರುವ ಸಿಟಿ ಸೆಂಟರ್ ಮಾಲ್ ಮತ್ತು ಇತರೇ ಅಂಗಡಿಗೆ ಬೆಂಕಿ ವ್ಯಾಪಿಸದಂತೆ ನೋಡಿಕೊಂಡಿದ್ದಾರೆ. ಅಗ್ನಿಶಾಮಕ ಸೇವೆಯಲ್ಲಿ ಯಾವುದೇ ವಿಳಂಬ ಅಗಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಖಾದರ್ ವಾಣಿಜ್ಯ ಕಟ್ಟಡದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದ ವೇಳೆ ಕಡೆಕಾರ್ 12ನೇ ಕ್ರಾಸ್ನ ಕೋಟಿ ಚೆನ್ನಯ್ಯ ರಸ್ತೆಯ ಬಳಿ ಗದ್ದೆಗೆ ಬೆಂಕಿ ಬಿದ್ದಿದ್ದನ್ನು ನಂದಿಸಲು ಜಲ ವಾಹನ ತೆರಳಿತ್ತು. ಮಲ್ಪೆ ಅಗ್ನಿಶಾಮಕ ಠಾಣೆಯ ಜಲವಾಹನವು ಶಿರ್ವ ಕುತ್ಯಾರಿಗೆ ಬೆಂಕಿ ನಂದಿಸಲು ತೆರಳಿತ್ತು ಎಂದೂ ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-28-1239315212

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.