ಉಡುಪಿ: ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಮೀನು ಇಳುವರಿ ನಿಗದಿತ ಗುರಿಗಿಂತ ಕುಸಿಯುತ್ತಿದ್ದು, ಮತ್ಸಕ್ಷಾಮವು ಮತ್ಸೋದ್ಯಮಕ್ಕೆ ಹೊಡೆತ ನೀಡುತ್ತಿದೆ.

2025–26ನೇ ಸಾಲಿನ ಮೀನುಗಾರಿಕಾ ಋತುವಲ್ಲಿ 2024–25ನೇ ಸಾಲಿನ ಮೀನುಗಾರಿಕಾ ಋತುವಿಗಿಂತ ಹೆಚ್ಚು ಇಳುವರಿ ಲಭಿಸಿದರೂ ನಿಗದಿತ ಗುರಿಗಿಂತ ಕಡಿಮೆ ಲಭಿಸಿದೆ ಎನ್ನುವುದು ಮೀನುಗಾರಿಕಾ ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ.

ಕಳೆದ ವರ್ಷ ಮೇ ತಿಂಗಳ ಮೂರನೇ ವಾರದಲ್ಲಿ ಆರಂಭವಾಗಿದ್ದ ಮಳೆಯು ಅಕ್ಟೋಬರ್ ತಿಂಗಳವರೆಗೂ ನಿರಂತರವಾಗಿ ಸುರಿದಿತ್ತು. ಇದರಿಂದಾಗಿ ಟ್ರಾಲಿಂಗ್ ನಿಷೇಧದ ಅವಧಿಯಲ್ಲಿ ನಾಡದೋಣಿಗಳಿಗೂ ಉತ್ತಮ ಮೀನುಗಾರಿಕೆ ನಡೆಸಲು ಸಾಧ್ಯವಾಗಿರಲಿಲ್ಲ.

ಟ್ರಾಲಿಂಗ್ ನಿಷೇಧ ತೆರವಾದ ಬಳಿಕವೂ ಪದೇ ಪದೇ ತೂಫಾನ್ ಬಂದುದರಿಂದ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ದೋಣಿಗಳು ಮಲ್ಪೆ ಬಂದರಿನಲ್ಲೇ ಲಂಗರು ಹಾಕಿದ್ದವು.

ಮಳೆಗಾಲದಲ್ಲಿ ಹವಾಮಾನ ವೈಪರೀತ್ಯದಿಂದ ಹೆಚ್ಚಿನ ದಿನಗಳಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಾಗಲಿಲ್ಲ. ಬೇಸಿಗೆಯಲ್ಲಿ ಮಾರ್ಚ್ ತಿಂಗಳಿನಿಂದಲೇ ಬಿಸಿಲಿನ ಧಗೆಯೂ ಹೆಚ್ಚಾಗಿ ಮೀನುಗಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು ಎಂದು ಮಲ್ಪೆಯ ಮೀನುಗಾರರು ತಿಳಿಸಿದ್ದಾರೆ.

ವಿಪರೀತ ಬಿಸಿಲಿನಿಂದಾಗಿ ಸಮುದ್ರದ ಮೇಲ್ಮೈನ ನೀರು ಬಿಸಿಯಾದ ಪರಿಣಾಮವಾಗಿ ಮೀನುಗಳು ಹೆಚ್ಚು ಆಳಕ್ಕಿಳಿಯುತ್ತಿದ್ದವು ಅದರಿಂದ ಮೀನುಗಾರಿಕೆಗೆ ತೆರಳಿದರೂ ಮೀನುಗಳೇ ಸಿಗುತ್ತಿರಲಿಲ್ಲ. ಆ ಕಾರಣಕ್ಕೆ ಮೇ ತಿಂಗಳ ಆರಂಭದಲ್ಲೇ ಹಲವು ಯಾಂತ್ರೀಕೃತ ದೋಣಿಗಳು ಬಂದರಿನಲ್ಲೇ ಉಳಿದುಕೊಂಡಿದ್ದವು ಎಂದೂ ಹೇಳಿದ್ದಾರೆ.

‘2025–26ನೇ ಸಾಲಿನ ಮೀನುಗಾರಿಕಾ ಋತುವಲ್ಲಿ ಬೂತಾಯಿ ಮೀನು ಸಾಕಷ್ಟು ಸಿಕ್ಕಿತ್ತು. ಆದರೆ ಬಂಗುಡೆ ಮೀನು ತೀರಾ ಕಡಿಮೆ ಸಿಕ್ಕಿದೆ. ಟ್ರಾಲ್ ಬೋಟ್ನವರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ಸಿಕ್ಕಿಲ್ಲ’ ಎಂದು ಮೀನುಗಾರಿಕಾ ಇಲಾಖೆಯ ಉಡುಪಿಯ ಪ್ರಭಾರ ಜಂಟಿ ನಿರ್ದೇಶಕ ಕುಮಾರ ಸ್ವಾಮಿ ತಿಳಿಸಿದರು.

‘ಅವೈಜ್ಞಾನಿಕ ಮೀನುಗಾರಿಕೆಗಳಾದ ಬುಲ್ ಟ್ರಾಲಿಂಗ್, ಲೈಟ್ ಫಿಶಿಂಗ್ ನಡೆಯದಂತೆ ಹೆಚ್ಚಿನ ನಿಗಾ ವಹಿಸಿದ್ದೇವೆ. ಮತ್ಸಕ್ಷಾಮ ಕಾಡುತ್ತಿರುವುದರಿಂದ ಈಗ ಮೀನುಗಾರರಿಗೂ ಅಂತಹ ಮೀನುಗಾರಿಕೆಗಳ ಬಗ್ಗೆ ಜಾಗೃತಿ ಮೂಡಿದೆ’ ಎಂದೂ ಅವರು ತಿಳಿಸಿದರು.

‘ಜೂನ್ 1ರಿಂದ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಜಾರಿಯಾಗುತ್ತಿದ್ದು, 10 ಎಚ್.ಪಿ. ಸಾಮರ್ಥ್ಯದ ಮೋಟಾರ್ಗಳನ್ನು ಅಳವಡಿಸಿರುವ ನಾಡ ದೋಣಿಗಳಿಗೆ ಮಾತ್ರ ಮೀನುಗಾರಿಕೆ ನಡೆಸಲು ಅನುಮತಿ ಇರುತ್ತದೆ. ಮೀನುಗಾರರು ಹವಾಮಾನ ಇಲಾಖೆ ನೀಡುವ ಮನ್ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಕುಂದಾಪುರ, ಬೈಂದೂರು ಮೊದಲಾದೆಡೆ ಇನ್ನೂ ನಾಡದೋಣಿಗಳಿಗೆ ಟ್ರಾನ್ಸ್ಪಾಂಡರ್ ಅಳವಡಿಸುವ ಕಾರ್ಯ ಬಾಕಿ ಇದೆ’ ಎಂದೂ ಅವರು ಹೇಳಿದರು.

‘ಈ ಋತುವಲ್ಲಿ ಸರಾಸರಿ ಮೀನುಗಾರಿಕೆ ನಡೆದಿಲ್ಲ’

‘2025–26ನೇ ಸಾಲಿನ ಮೀನುಗಾರಿಕಾ ಋತುವಲ್ಲಿ ಸರಾಸರಿ ಮೀನುಗಾರಿಕೆ ನಡೆದಿಲ್ಲ. ಬೂತಾಯಿ, ಬಂಗುಡೆ ಮೀನುಗಳು ಅಪರೂಪಕ್ಕೆ ಸಿಗುತ್ತಿದ್ದವು. ಕೆಲವು ದೋಣಿಯವರಿಗೆ ಉತ್ತಮ ಮೀನುಗಾರಿಕೆಯಾದರೆ ಇನ್ನು ಕೆಲವರು ಬರಿಗೈಯಲ್ಲಿ ಮರಳಿದ್ದರು’ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ತಿಳಿಸಿದರು.

‘ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆದಿರುವುದೂ ಈ ಬಾರಿ ಮೀನುಗಾರಿಕೆ ಮೇಲೆ ಪರಿಣಾಮ ಬೀರಿತ್ತು. ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಸಿಗದೆ ಆಳ ಸಮುದ್ರಕ್ಕೆ ತೆರಳುವ ಮೀನುಗಾರರಿಗೆ ಸಮಸ್ಯೆಯಾಗಿತ್ತು. ಮೀನುಗಳು ರಫ್ತಾಗದ ಕಾರಣ ಕೆಲವು ದೋಣಿಗಳು ಮೀನುಗಾರಿಕೆಗೆ ತೆರಳಿರಲಿಲ್ಲ. ನಡುವೆ ಡೀಸೆಲ್ ಸಮಸ್ಯೆಯೂ ಕಾಡಿದ್ದು, ಮೀನುಗಾರರು ಹೈರಾಣಗಿದ್ದರು’ ಎಂದು ಅವರು ವಿವರಿಸಿದರು.

ಅವೈಜ್ಞಾನಿಕ ಮೀನುಗಾರಿಕೆ ಯಿಂದಲೂ ತೊಂದರೆ

ಬುಲ್ ಟ್ರಾಲ್, ಲೈಟ್ ಫಿಶಿಂಗ್ ಸೇರಿದಂತೆ ಅವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆ ನಡೆಸುವುದಕ್ಕೆ ನಿರ್ಬಂಧವಿದ್ದರೂ ಕೆಲವು ದೋಣಿಯವರು ಕದ್ದು ಮುಚ್ಚಿ ಇಂತಹ ಮೀನುಗಾರಿಕೆ ನಡೆಸುತ್ತಿರುವುದು ಮತ್ಸಕ್ಷಾಮಕ್ಕೆ ಕಾರಣವಾಗಿದೆ ಎನ್ನುತ್ತಾರೆ ಮೀನುಗಾರರು.

ರಾತ್ರಿ ವೇಳೆಗಳಲ್ಲಿ ಪ್ರಖರವಾದ ಬೆಳಕು ಹಾಯಿಸಿ ಲೈಟ್ ಫಿಶಿಂಗ್ ನಡೆಸುವುದರಿಂದ ಮೀನುಗಳ ಸಂತತಿ ನಾಶಕ್ಕೂ ಕಾರಣವಾಗುತ್ತಿದೆ. ಅಂತಹ ಮೀನುಗಾರಿಕೆಯಿಂದ ನಾಡ ದೋಣಿ ಮೀನುಗಾರರಿಗೆ ಕೂಡ ಮೀನುಗಳು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.