ಪಡುಬಿದ್ರಿ: ಟೈರ್ ಪಂಕ್ಚರ್ ಅಂಗಡಿ ಯೊಂದು ಅಗ್ನಿ ಅನಾಹುತದಿಂದಾಗಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಪ್ಲಾಝಾ ಬಳಿ ಭಾನುವಾರ ನಡೆದಿದೆ.

ವಿದ್ಯುತ್ ಟ್ರಾನ್ಸ್ಫಾರ್ಮರ್ನಿಂದ ಬೆಂಕಿಯ ಕಿಡಿ ಸಿಡಿದು ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಟೈರ್ ಪಂಕ್ಚರ್ ಅಂಗಡಿಗೂ ಹಬ್ಬಿದೆ ಎನ್ನಲಾಗಿದೆ.

ಅಂಗಡಿಯೊಳಗಿದ್ದ ಕಂಪ್ರೆಸರ್, ಜನರೇಟರ್, ಟೂಲ್ ಕಿಟ್, ಟೈರ್ ಸುಟ್ಟುಹೋಗಿದೆ. ಬಿಹಾರದ ಸೈಫುಲ್ಲಾ ಎಂಬುವವರು ಈ ಅಂಗಡಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಬೆಂಕಿ ಕಾಣಿಸಿಕೊಂಡಾಗ ಸ್ಥಳೀಯರು ಮತ್ತು ಪಡುಬಿದ್ರಿ ಪೊಲೀಸರು ಬಕೆಟ್ಗಳಲ್ಲಿ ನೀರು ತಂದು ಹಾಕಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಉಡುಪಿ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-28-1309217641

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.