ಉಡುಪಿ: ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನು ಹೋಟೆಲ್ನವರಿಗೆ ಚೌಕಾಸಿ ಮಾಡಿ ಶೇ 25ರಷ್ಟು ಕೊಡುವುದು ಬೇಡ. ಸಮರ್ಪಕವಾಗಿ ಪೂರೈಸಿ ಎಂದು ಹೋಟೆಲ್ ಮಾಲೀಕ ಶಿವಪ್ರಸಾದ್ ಶೆಟ್ಟಿ ಆಗ್ರಹಿಸಿದರು.

ನಗರದ ಡಯಾನ ಹೋಟೆಲ್ನಲ್ಲಿ ಶುಕ್ರವಾರ ನಡೆದ ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಇಂಡಕ್ಷನ್ ಸ್ಟೌವ್ ಸಿಗುತ್ತಿಲ್ಲ. ಕಟ್ಟಿಗೆ ಕೊರತೆಯೂ ಕಾಡುತ್ತಿದೆ. ಹೀಗಿರುವಾಗ ಹೋಟೆಲ್ಗಳಿಗೆ ಬಳಕೆಯ ಶೇ 25 ರಷ್ಟು ಅಡುಗೆ ಅನಿಲ ಕೊಟ್ಟು ಏನು ಪ್ರಯೋಜನ ಎಂದರು.

‘ಕೋವಿಡ್ ಸಂದರ್ಭದಲ್ಲೂ ಹೋಟೆಲ್ನವರೇ ತೊಂದರೆ ಅನುಭವಿಸಿದ್ದೇವೆ. ಈಗಲೂ ನಾವೇ ಸಮಸ್ಯೆಗೆ ಸಿಲುಕಿದ್ದೇವೆ. ಒಂದು ದಿನ ಜಿಲ್ಲೆಯ ಸಮಸ್ತ ಹೋಟೆಲ್ಗಳನ್ನು ಬಂದ್ ಮಾಡಿ ನಮ್ಮ ಅನಿವಾರ್ಯತೆಯನ್ನು ತಿಳಿಸಿಕೊಡಬೇಕು’ ಎಂದು ಅವರು ಸಭೆಯಲ್ಲಿ ತಿಳಿಸಿದರು.

ಹೋಟೆಲ್ಗಳಲ್ಲೂ ಸಿಬ್ಬಂದಿ, ಕಾರ್ಮಿಕರು ಇದ್ದಾರೆ. ಅವರಿಗೆ ಊಟ ಹೇಗೆ ಕೊಡುತ್ತೀರಿ ಎಂದು ಯಾರೂ ಕೇಳುವುದಿಲ್ಲ. ಉಡುಪಿ ಬಸ್ ನಿಲ್ದಾಣಕ್ಕೆ ಪ್ರತಿದಿನ ಸುಮಾರು 650 ಬಸ್ಗಳು ಬರುತ್ತವೆ. ಅದರಲ್ಲಿ ಬರುವ ಪ್ರವಾಸಿಗರ ಊಟ, ತಿಂಡಿಗೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಅಡುಗೆ ಅನಿಲ ಕೊರತೆಯಿಂದಾಗಿ ಹೋಟೆಲ್ನ ಮೆನುವಿನಲ್ಲಿ ಕಡಿತ ಮಾಡಿರುವುದರಿಂದ ಶೇ 60ರಷ್ಟು ವ್ಯಾಪಾರ ಬಿದ್ದು ಹೋಗಿದೆ. ಮುಂದಿನ ವಾರದಿಂದ ಕಟ್ಟಿಗೆಯೂ ಸಿಗಲಾರದು. ಸಮಸ್ಯೆ ಯಾವಾಗ ಪರಿಹರಿಸುತ್ತೀರಿ ಎಂದು ಸಂಬಂಧಪಟ್ಟವರು ತಿಳಿಸಬೇಕು ಎಂದರು.

ಅಡುಗೆ ಅನಿಲ ಸಮರ್ಪಕವಾಗಿ ಸಿಗುವವರೆಗೆ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೋಟೆಲ್ ಮಾಲೀಕ ಶ್ರೀಕಾಂತ್ ಭಟ್ ಹೇಳಿದರು.

‘ನಮ್ಮ ಕಾರ್ಮಿಕರು ಗ್ಯಾಸ್ ಒಲೆಯಲ್ಲಿ ಅಡುಗೆ ಮಾಡಲು ಒಗ್ಗಿ ಹೋಗಿದ್ದಾರೆ. ಮೊದಲೇ ಕಾರ್ಮಿಕರ ಸಮಸ್ಯೆ ಇದೆ. ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ ಎಂದರೆ ಶೇ 50ರಷ್ಟು ಕಾರ್ಮಿಕರು ಕೆಲಸ ಬಿಟ್ಟು ಹೋಗುತ್ತಾರೆ ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಇದು ತಾತ್ಕಾಲಿಕ ಸಮಸ್ಯೆ, ಕೇಂದ್ರ ಸರ್ಕಾರವು ಎಸ್ಮಾ ಜಾರಿ ಮಾಡಿ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ನಿಯಂತ್ರಿಸಲು ನಿರ್ದೇಶನ ನೀಡಿದೆ’ ಎಂದರು.

ಇದು ಜಗತ್ತಿಗೆ ಬಂದಿರುವ ಸಮಸ್ಯೆಯಾಗಿರುವುದರಿಂದ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವುದರಿಂದ ಯಾರಿಗೂ ಯಾವುದೇ ಪ್ರಯೋಜನವಾಗದು ಎಂದು ಹೇಳಿದರು.

ನಿಯಮ ಸಡಿಲಿಸಿ ಹೋಟೆಲ್ನವರಿಗೆ ಸಿಲಿಂಡರ್ ನೀಡುವಂತೆ ಜಿಲ್ಲಾಧಿಕಾರಿ ಅವರಲ್ಲಿ ಚರ್ಚಿಸಲಾಗುವುದು ಎಂದರು.

ಸಭೆಯಲ್ಲಿ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಲಕ್ಷ್ಮಣ ವಾಗ್ಲೆ, ವಿಠಲ ಪೈ, ನಾಗೇಶ್ ಭಟ್ ಉಪಸ್ಥಿತರಿದ್ದರು.

ಎಲ್ಲಾ ಹೋಟೆಲ್ನವರು ಒಂದು ಕಡೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ ಹೋಟೆಲ್ಗಳಿಗೆ ಸರಬರಾಜು ಮಾಡುವಂತೆ ವ್ಯವಸ್ಥೆ ಮಾಡಬಹುದೋ ಪರಿಶೀಲಿಸಿ.
ಮಾಧವ ಪ್ರಭು ಹೋಟೆಲ್ ಮಾಲೀಕ

‘ಪೂರೈಕೆದಾರರು ಕಾಳಸಂತೆ ನಡೆಸುವುದಿಲ್ಲ’ ಅಡುಗೆ ಅನಿಲ ಪೂರೈಕೆದಾರರು ಕಾಳಸಂತೆಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನು ಮಾರಾಟ ಮಾಡುವುದಿಲ್ಲ. ಪ್ರತಿದಿನ ಸಿಲಿಂಡರ್ ದಾಸ್ತಾನನ್ನು ಪೊಲೀಸರು ಬಂದು ಪರಿಶೀಲಿಸುತ್ತಿದ್ದಾರೆ ಎಂದು ಪುತ್ರನ್ ಗ್ಯಾಸ್ ಏಜೆನ್ಸಿ ಮಾಲೀಕ ದಿನೇಶ್ ಪುತ್ರನ್ ಸಭೆಯಲ್ಲಿ ತಿಳಿಸಿದರು. ಗೃಹ ಬಳಕೆಯ ಎರಡು ಸಿಲಿಂಡರ್ ಇರುವವರಿಗೆ ಬುಕ್ಕಿಂಗ್ ಅವಧಿಯನ್ನು 30 ದಿನಗಳಿಗೆ ಏರಿಸಿದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ಬಳಿಕ ಜನರು ಆತಂಕಗೊಂಡು ಒಮ್ಮೆಲೆ ಬುಕ್ಕಿಂಗ್ ಮಾಡಿದ್ದರಿಂದ ಸಿಸ್ಟಂ ಕ್ರ್ಯಾಶ್ ಆಗಿ ಸಮಸ್ಯೆಯಾಗಿತ್ತು. ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನು ಸರಬರಾಜು ಮಾಡುವುದಕ್ಕೆ ಕಂಪನಿಗಳಿಗೆ ಮಿತಿ ಹೇರಿರುವುದರಿಂದ ನಮ್ಮಲ್ಲಿಗೆ ಸಮರ್ಪಕವಾಗಿ ಸಿಲಿಂಡರ್ಗಳು ಬರುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.