ಉಡುಪಿ: ‘ಇಂದು ನಮ್ಮ ದೇಶದಲ್ಲಿ ದಲಿತರು, ಮಹಿಳೆಯರು, ಕಾರ್ಮಿಕರು ತಮ್ಮ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಎಸ್ಐಆರ್ನ ಮೂಲಕ ನಮ್ಮ ಮತದಾನದ ಹಕ್ಕನ್ನೂ ಕಸಿಯುವ ಪ್ರಯತ್ನ ನಡೆಯುತ್ತಿದೆ’ ಎಂದು ಚಿಂತಕ ಫಣಿರಾಜ್ ಆರೋಪಿಸಿದರು.

ಸಹಬಾಳ್ವೆ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಸಿಐಟಿಯು, ರಥಬೀದಿ ಗೆಳೆಯರು ಹಾಗೂ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಜಿಲ್ಲಾ ಘಟಕದ ವತಿಯಿಂದ ನಗರದ ಅಜ್ಜರಕಾಡಿನ ವಿಮಾ ನೌಕರರ ಸಂಘದ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾಡ್ ಸತ್ಯಾಗ್ರಹ ಚಾರಿತ್ರಿಕ ಮಹತ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾಗರಿಕ ಸಮಾನತೆಗಾಗಿ ಮಹಾರಾಷ್ಟ್ರದ ಮಹಾಡ್ನಲ್ಲಿ ನಡೆದ ಸತ್ಯಾಗ್ರಹವು ದಲಿತರ ಸಂಘಟಿತ ಹೋರಾಟದ ಜೊತೆಗೆ ಕಾರ್ಮಿಕರು, ಮಹಿಳೆಯರು ತಮ್ಮ ನಾಗರಿಕ ಹಕ್ಕುಗಳಿಗೆ ಹೋರಾಟ ನಡೆಸಲು ಪ್ರೇರಣೆಯಾಯಿತು’ ಎಂದರು.

‘ಮಹಾಡ್ ಸತ್ಯಾಗ್ರಹವು ದಲಿತರು ನೆನಪಿಡಬೇಕಾದ ಚಳುವಳಿಯಾಗಿದೆ. ಆದರೆ ಯಾವುದೇ ಪಠ್ಯ ಪುಸ್ತಕಗಳಲ್ಲಾಗಲಿ, ಪುಸ್ತಕಗಳಲ್ಲಾಗಲಿ ಅದರ ಮಾಹಿತಿ ಸಿಗದಿರುವುದು ದುರಾದೃಷ್ಟ. 1927ರ ಮಾರ್ಚ್ 20ರಂದು ನಡೆದ ಈ ಸತ್ಯಾಗ್ರಹವು ದಲಿತರು ಸಂಘಟಿತರಾಗಿ ದೌರ್ಜನ್ಯ, ಊಳಿಗಮಾನ್ಯ ಪದ್ಧತಿಯ ವಿರುದ್ಧ ನಡೆಸಿದ ಮೊದಲ ಹೋರಾಟವಾಗಿದೆ’ ಎಂದು ಹೇಳಿದರು.

‘ಮಹಾಡ್ ಚಳವಳಿಯ ಬಳಿಕ ದೇಶದಲ್ಲಿ ದಲಿತರು, ದಮನಿತರು ಜಾಗೃತರಾದರು ಮತ್ತು ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದರು. ಮಹಾಡ್ನ ಕೆರೆಯ ನೀರನ್ನು ದಲಿತರು ಸೇವಿಸುವ ಮೂಲಕ ನಡೆಸಿದ ಮಹಾಡ್ ಸತ್ಯಾಗ್ರಹದ ಪ್ರೇರಣೆಯಿಂದ ಸಂವಿಧಾನದಲ್ಲಿ 15ನೇ ಮತ್ತು 17ನೇ ವಿಧಿಯನ್ನು ಅಂಬೇಡ್ಕರ್ ಸೇರಿಸಿದ್ದರು ಎಂದು ತಿಳಿಸಿದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ, ‘ಮಹಾಡ್ ಸತ್ಯಾಗ್ರಹವು ಅಸ್ಪೃಶ್ಯತೆಯ ಬೇರುಗಳನ್ನು ಅಲುಗಾಡಿಸಿದ ಮೊದಲ ಹೋರಾಟವಾಗಿದೆ. ಆರ್.ಬಿ. ಮೋರೆ ಅವರು ಈ ಹೋರಾಟದ ಕಿಚ್ಚು ಹೆಚ್ಚಿಸಿದ್ದರು’ ಎಂದರು.

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಮಿತಿ ಸಂಚಾಲಕ ಸುಂದರ್ ಮಾಸ್ತರ್, ಶ್ಯಾಮ್ರಾಜ್ ಬಿರ್ತಿ ಉಪಸ್ಥಿತರಿದ್ದರು. ಕವಿರಾಜ್ ಎಸ್. ಕಾಂಚನ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-28-532640889

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.