ಉಡುಪಿ: ನಗರದ ಕಿನ್ನಿಮುಲ್ಕಿ ಬಳಿಯ ಸರ್ವಿಸ್ ರಸ್ತೆ ಬದಿ ತ್ಯಾಜ್ಯ ಕೊಂಪೆಯಾಗಿ ನಗರದ ಅಂದಗೆಡಿಸುವುದರ ಜೊತೆಗೆ ರೋಗ ಭೀತಿಯನ್ನೂ ಸೃಷ್ಟಿಸಿದೆ.

ಹಲವು ತಿಂಗಳುಗಳಿಂದ ಇಲ್ಲಿ ರಾಶಿ ರಾಶಿ ಕಸ ಎಸೆಯುತ್ತಿದ್ದರು ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ

ಕಿನ್ನಿಮುಲ್ಕಿಯಿಂದ ಕರಾವಳಿ ಜಂಕ್ಷನ್ ಕಡೆಗೆ ಹೋಗುವ ಸರ್ವಿಸ್ ರಸ್ತೆಯ ಬದಿಯಲ್ಲಿ ನಿರಂತರ ಕಸ ಎಸೆಯಲಾಗುತ್ತಿದೆ. ಪ್ಲಾಸ್ಟಿಕ್ ಚೀಲದಲ್ಲಿ ಕಸವನ್ನು ತುಂಬಿಸಿ ರಸ್ತೆ ಬದಿಗೆ ಎಸೆಯಲಾಗುತ್ತಿದೆ.

ಕಸ ರಾಶಿ ಬಿದ್ದಿರುವುದರಿಂದ ಪರಿಸರದಲ್ಲಿ ದುರ್ವಾಸನೆ ಹರ ಡಿದ್ದು, ಪಾದಚಾರಿಗಳು ಮೂಗು ಮುಚ್ಚಿಕೊಂಡು ತೆರಳಬೇಕಾಗಿದೆ. ವಾಹನಗಳಲ್ಲಿ ತೆರಳುವವರ ಮೂಗಿಗೆಗೂ ದುರ್ಗಂಧ ಬಡಿಯುತ್ತಿದೆ.

ರಾತ್ರಿ ವೇಳೆಗಳಲ್ಲಿ ವಾಹನಗಳಲ್ಲಿ ತಂದು ಕಸವನ್ನು ಇಲ್ಲಿ ಎಸೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಸ ಎಸೆಯುತ್ತಿರುವ ಪ್ರದೇಶಕ್ಕಿಂತ ಕೆಳಭಾಗದಲ್ಲಿ ಮನೆಗಳಿದ್ದು ಅಲ್ಲಿನ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಜೋರಾಗಿ ಮಳೆ ಬಂದರೆ ಈ ಕಸ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಚರಂಡಿಯಲ್ಲಿ ಕಟ್ಟಿ ನಿಲ್ಲುವ ಸಾಧ್ಯತೆಯೂ ಇದೆ ಎಂದು ಜನರು ಹೇಳುತ್ತಾರೆ.

ಸ್ವಾಗತ ಗೋಪುರದ ಬಳಿಯ ಸರ್ವಿಸ್ ರಸ್ತೆಯ ಬದಿಯಲ್ಲಿ ಕಸದ ರಾಶಿ ತುಂಬಿದ್ದರೆ. ಅಲ್ಲಿಂದ ಮುಂದೆ ರಸ್ತೆ ಬದಿಯ ಗಿಡ ಗಂಟೆಗಳ ನಡುವೆಯೂ ರಾಶಿ ರಾಶಿ ಕಸ ಎಸೆಯಲಾಗಿದೆ.

ಕಸ ಎಸೆಯುತ್ತಿರುವ ಪ್ರದೇಶದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಸ್ಥಾಪಿಸಿ, ಕಸ ಎಸೆಯುವವರಿಗೆ ದಂಡ ವಿಧಿಸಬೇಕೆಂದು ಜನರು ಆಗ್ರಹಿಸುತ್ತಲೇ ಇದ್ದಾರೆ. ಆದರೆ ಇನ್ನೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರ ದೂರಿದ್ದಾರೆ .

ಇದೇ ಸರ್ವಿಸ್ ರಸ್ತೆಯ ಬದಿಯ ಚರಂಡಿಯ ಸ್ಲಾಬ್ ಕಿತ್ತು ಹೋಗಿರುವ ಜಾಗದಲ್ಲಿ ಚರಂಡಿ ಒಳಗೆ ರಾಶಿ ರಾಶಿ ಕಸವನ್ನು ತುಂಬಿಸಲಾಗಿದೆ.

ಚರಂಡಿಯಲ್ಲಿ ಕಸ ತುಂಬಿರುವ ಕಾರಣ ಮಳೆ ನೀರು ಹರಿಯದೆ ರಸ್ತೆಯಲ್ಲಿ ಹರಿಯುವ ಸಾಧ್ಯತೆ ಇದೆ ಎಂದು ಜನರು ಹೇಳಿದ್ದಾರೆ. ಅಂಗಡಿ, ಹೋಟೆಲ್ನವರು ಕೂಡ ಇಲ್ಲಿ ಕಸ ತಂದು ಎಸೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಸ ರಾಶಿ ಬಿದ್ದಿರುವುದರಿಂದ ಅದರಲ್ಲಿರುವ ಆಹಾರ ಪದಾರ್ಥಗಳನ್ನು ತಿನ್ನಲು ಬೀದಿನಾಯಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತವೆ ಅದರಿಂದ ಪಾದಾಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದೂ ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-28-1956387731

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.