ಉಡುಪಿ: ಮಲ್ಪೆಯ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಆಶ್ರಯದಲ್ಲಿ ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕೃಷ್ಣಾಪುರ, ಅದಮಾರು, ಪಲಿಮಾರು, ಪೇಜಾವರ ಮತ್ತು ಸೋದೆ ಮಠಾಧೀಶರ ಸಂಕಲ್ಪದಂತೆ ಮಲ್ಪೆಯ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಆಶ್ರಯದಲ್ಲಿ ಇದೇ 15 ರಿಂದ 31ರ ವರೆಗೆ ಮಲ್ಪೆಯ ಕಡಲತೀರದ ಶ್ರೀಆನಂದ ಶರಧಿ ನಿವೇಶನದಲ್ಲಿ ‘ಆನಂದ ಶರಧಿ’ ಕಾರ್ಯಕ್ರಮ ನಡೆಯಲಿದೆ ಎಂದು ನಗರಸಭೆಯ ಮಾಜಿ ಸದಸ್ಯ ವಿಜಯ ಕೊಡವೂರು ತಿಳಿಸಿದರು.

ಭಜನಾ ಸ್ಪರ್ಧೆ, ಕೃಷಿಮೇಳ ಮತ್ತು ಗ್ರಾಮೀಣ ಕ್ರೀಡಾಕೂಟವನ್ನು ಈ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗುತ್ತಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

15ರಿಂದ ಮೂರು ದಿನ ಕೃಷಿಮೇಳ ನಡೆಯಲಿದ್ದು ಹಲಸು, ಮಾವು ಮೇಳವೂ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥರು, ಸೋದೆ ಮಠದ ವಿಶ್ವವಲ್ಲಭತೀರ್ಥರು ಮತ್ತು ಅದಮಾರು ಮಠದ ಈಶಪ್ರಿಯತೀರ್ಥ ಶ್ರೀಪಾದರು ಪಾಲ್ಗೊಳ್ಳಲಿದ್ದಾರೆ ಎಂದರು.

ಮೇ 18ರಂದು ಮಧ್ಯಾಹ್ನ 3.30ರಿಂದ ವಡಭಾಂಡೇಶ್ವರದ ಬಲರಾಮ ದೇವಳದಿಂದ ಆನಂದ ಶರಧಿ ನಿವೇಶನದ ವರೆಗೆ ಶೋಭಾಯಾತ್ರೆ ನಡೆಯಲಿದೆ 24ರಂದು ಬೆಳಿಗ್ಗೆ 7ರಿಂದ ಗ್ರಾಮೀಣ ಕ್ರೀಡಾ ಸ್ಪರ್ಧೆ, ಮೇ 31ರಂದು ಮಾತೃವಂದನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಗೋವಿಂದರಾಜ್, ತಾರಾ ಆಚಾರ್ಯ, ಸುಮಿತ್ರಾ ಕೆರೆಮಠ, ಕಮಲಾವತಿ, ರಾಧಾಕೃಷ್ಣ ಮೆಂಡನ್, ಪ್ರೀತಂ ಭಟ್, ಸಂತೋಷ್ ಉದ್ಯಾವರ, ಚಂದ್ರಕಾಂತ ಕೆ.ಎನ್. ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-28-1033686180

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.