ಮಣಿಪಾಲ: ಉಡುಪಿಯ ಶಿವಳ್ಳಿ ಗ್ರಾಮದ ನಿವಾಸಿ ದಿಲೀಪ್ ಆರ್. ಅಡಿಗ (35) ಎಂಬುವವರಿಗೆ ₹33 ಕೋಟಿ ನೀಡದೆ ವಂಚನೆ ನಡೆಸಿರುವ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿಲೀಪ್ ಅವರು ಲಕ್ಷ್ಮೀಂದ್ರ ನಗರದಲ್ಲಿ ಎಂ.ಎನ್. ಶೆಟ್ಟಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ನಡೆಸುತ್ತಿದ್ದು, ಸಿಂಗಾಪುರ ಮೂಲದ ಇನ್ಫೊಮೊ ಗ್ಲೋಬಲ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಸಿಇಒ ಆನಂದ ರಾವ್ ಎಂಬುವವರು ಸಂಪರ್ಕಿಸಿ, ದಿಲೀಪ್ ಅವರ ಕಂಪನಿಯಲ್ಲಿ ತಯಾರಾಗುವ ಸಿಎಂಎಸ್ ಉತ್ಪನ್ನವನ್ನು ಖರೀದಿಸಲು ಆಸಕ್ತಿ ತೋರಿದ್ದರು. ದೂರವಾಣಿ ಮೂಲಕ ನಡೆದ ಮಾತುಕತೆಯ ನಂತರ, ₹ 35 ಲಕ್ಷ ಹಾಗೂ ಸಿಂಗಾಪುರ ಕಂಪನಿಯ ₹17.5 ಲಕ್ಷ ಮೌಲ್ಯದ ಷೇರುಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.

ಈ ಷೇರುಗಳು ಮೂರು ವರ್ಷಗಳ ಬಳಿಕ ₹33 ಕೋಟಿ ಮೌಲ್ಯ ತಲುಪಲಿದೆ ಹಾಗೂ ಕಂಪನಿಯ ಷೇರು ₹9 ಸಾವಿರ ಕೋಟಿ ಆಗಲಿದೆ ಎಂದು ಸುಳ್ಳು ಮಾಹಿತಿ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಪ್ಪಂದದ ಪ್ರಕಾರ ದಿಲೀಪ್ ಅವರು ತಮ್ಮ ಕಂಪನಿಯ ಉತ್ಪನ್ನವನ್ನು ಕಳುಹಿಸಿದ್ದು, ಆರೋಪಿಗಳ ಕಂಪನಿಗಾಗಿ ಕೆಲಸವೂ ಪ್ರಾರಂಭಿಸಿದ್ದರು. ಮೂರು ವರ್ಷದ ಅವಧಿ ಪೂರ್ಣಗೊಂಡ ನಂತರ, ಒಪ್ಪಂದದಂತೆ ವ್ಯಾಲ್ಯೂಯೇಷನ್ ವರದಿ ನೀಡುವಂತೆ ಕೇಳಿದರೂ ಯಾವುದೇ ಸ್ಪಷ್ಟ ಉತ್ತರ ಸಿಗಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಪ್ರಕರಣದಲ್ಲಿ ಸಿಂಗಪುರದ ಕಂಪನಿಯ ಸಿಇಒ ಆನಂದ ರಾವ್, ಕಂಪನಿ ಅಧ್ಯಕ್ಷ ಪೀಟರ್ ಜಪ್ರೀ ಜರ್ಮೈನ್, ಸಿಟಿಒ ರಾಘವೇಂದ್ರ ಅಗರವಾಲ, ನಿರ್ದೇಶಕಿ ಸ್ಮಿತಾ ಶಾಹು ಹಾಗೂ ಬೋರ್ಡ್ ಸದಸ್ಯ ಅಸುತೋಷ್ ಶ್ರೀವತ್ಸವ ಸೇರಿ ಸಂಚು ರೂಪಿಸಿ ₹33 ಕೋಟಿ ನೀಡದೆ ವಂಚನೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-28-1846666914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.