ಉಡುಪಿ: ಮಣಿಪಾಲದಲ್ಲಿ ನಡೆದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ತೆಲಂಗಾಣದ ನಲಗೊಂಡ ಜಿಲ್ಲೆಯ ರಮಾನಾಥ ಶ್ರೀನು(30), ಮೋಹನ್ ರಮವಾತ್(22), ಪರಮೇಶ್(30), ಪಾಲ್ತ್ಯಾ ವಿಜಯ್(25) ಬಂಧಿತ ಆರೋಪಿಗಳು.

ಮಾ.31ರಂದು ಮಧ್ಯಾಹ್ನ ಕುಂದಾ ಪುರ ದಾಸರಮಕ್ಕಿಯ ರಾಜೇಶ್ ತಮ್ಮನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯ ಹೊರಬದಿಯ ಕ್ಯಾಂಟಿನಿನಲ್ಲಿ ಟೀ ಕುಡಿಯುತ್ತಿರುವಾಗ ಕಾರಿನಲ್ಲಿ ಬಂದ ಆರೋಪಿಗಳು ರಾಜೇಶ್ ಅವರನ್ನು ಹಿಡಿದು ಕಾರಿನಲ್ಲಿ ಕೂರಿಸಿ ಅಪಹರಿಸಿಕೊಂಡು ಹೋಗಿದ್ದಾರೆಂದು ದೂರಲಾಗಿತ್ತು.

ತೆಲಂಗಾಣದಲ್ಲಿರುವ ವ್ಯವಹಾರದ ವಿಷಯಕ್ಕೆ ಸಂಬಂಧಿಸಿ ರಾಜೇಶ್ ಅವರನ್ನು ಅಪಹರಿ ಸಿಕೊಂಡು ಹೋಗಿರುವುದಾಗಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ತೆಲಂಗಾಣ ರಾಜ್ಯದ ಜಗತಿಹಾಳ್ ಜಿಲ್ಲೆಯ ಕರಿಂ ನಗರದ ಗೋವಿಂದಪಲ್ಲಿ ಎಂಬಲ್ಲಿನ ಲಾಡ್ಜ್ನಿಂದ ಆರೋಪಿಗ ಳನ್ನು ಬಂಧಿಸಿದ್ದರು.

ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಪತ್ತೆ ಹಚ್ಚಿ ರಕ್ಷಿಸಿದ ಪೊಲೀಸರ ತಂಡ, ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಕ್ಕೆ ಪಡೆದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-28-693767536

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.